ಯೆಹೆಜ್ಕೇಲನು 5:4

ತಿರುಗಿ ಅವುಗಳೊಳಗಿಂದ ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ ಅವುಗಳನ್ನು ಬೆಂಕಿಯಿಂದ ಸುಡು; ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರೆಗೂ ಹೋಗುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 5

2ಅದರ ಮೂರನೆಯ ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು, ಮೂರನೆಯ ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು; ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಕತ್ತಿಯನ್ನು ಬೀಸುವೆನು

3ನೀನು ಅವುಗಳೊಳಗಿಂದ ಕೆಲವನ್ನು ಲೆಕ್ಕದಲ್ಲಿ ತೆಗೆದು ನಿನ್ನ ಸೆರಗುಗಳಲ್ಲಿ ಕಟ್ಟು ಅಂದನು.

4ತಿರುಗಿ ಅವುಗಳೊಳಗಿಂದ ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ ಅವುಗಳನ್ನು ಬೆಂಕಿಯಿಂದ ಸುಡು; ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರೆಗೂ ಹೋಗುವದು.

5ದೇವರಾದ ಕರ್ತನು ಹೇಳುವದೇನಂದರೆ--ಇದೇ ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ಮಧ್ಯೆ ಇಟ್ಟಿದ್ದೇನೆ.

6ಆಕೆಯು (ಅದು) ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತ್ವಕ್ಕೆ ತಿರುಗಿಸಿ ಬಿಟ್ಟಳು. ಅವರು ನನ್ನ ನ್ಯಾಯಗಳನ್ನು ನಿಯಮಗಳನ್ನು ಅನುಸರಿಸದೆ ನಿರಾಕರಿಸಿದ್ದಾರೆ.

ಯೆಹೆಜ್ಕೇಲನು 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी