ಪ್ರಲಾಪಗಳು 2:13

ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?

ಸಂದರ್ಭದೊಂದಿಗೆ ಓದಿ · ಪ್ರಲಾಪಗಳು 2

11ನನ್ನ ಕಣ್ಣುಗಳು ಕಣ್ಣೀರನ್ನು ಸುರಿಸುತ್ತಲೇ ಇವೆ. ನನ್ನ ಕರುಳುಗಳು ಕುದಿಯುತ್ತವೆ, ನನ್ನ ಪಿತ್ತಕೋಶವು ನೆಲದ ಮೇಲೆ ಸುರಿಯಲ್ಪಟ್ಟಿದೆ, ಯಾಕಂದರೆ ನನ್ನ ಜನರ ಮಗಳು ನಾಶವಾಗಿದ್ದಾಳೆ. ಮಕ್ಕಳೂ ಮೊಲೆಕೂಸುಗಳೂ ನಗರದ ಬೀದಿಗಳಲ್ಲಿ ಮೂರ್ಛೆ ಹೋಗಿದ್ದಾರೆ.

12ಅವರು ನಗರದ ಬೀದಿ ಗಳಲ್ಲಿ ಗಾಯ ಪಟ್ಟವರ ಹಾಗೆ ಮೂರ್ಛೆ ಹೋಗಿ, ತಮ್ಮ ತಾಯಂದಿರ ಎದೆಯಲ್ಲಿ ಬೀಳುತ್ತಾ--ರೊಟ್ಟಿಯೂ ದ್ರಾಕ್ಷಾರಸವೂ ಎಲ್ಲಿ ಎಂದು ತಮ ತಾಯಂದಿರಿಗೆ ಹೇಳುತ್ತಾರೆ.

13ಯೆರೂಸಲೇಮಿನ ಕುಮಾರ್ತೆಯೇ, ನಾನು ಯಾವದನ್ನು ನಿನಗೆ ಸಾಕ್ಷಿಯ ನ್ನಾಗಿಡಲಿ? ಯಾವದನ್ನು ನಿನಗೆ ಸಮಾನ ಮಾಡಲಿ? ಚೀಯೋನಿನ ಮಗಳಾದ ಕನ್ಯೆಯೇ, ನಿನ್ನನ್ನು ಆದರಿಸುವ ಹಾಗೆ ನಾನು ಯಾವದನ್ನು ನಿನಗೆ ಸಮಾನಮಾಡಲಿ? ನಿನ್ನ ಮುರಿಯುವಿಕೆಯು ಸಮುದ್ರದ ಹಾಗೆ ದೊಡ್ಡ ದಾಗಿದೆ, ನಿನ್ನನ್ನು ಗುಣಪಡಿಸುವವರು ಯಾರು?

14ನಿನ್ನ ಪ್ರವಾದಿಗಳು ನಿನಗಾಗಿ ವ್ಯರ್ಥವಾದ ಮೂರ್ಖತನದ ವಿಷಯಗಳನ್ನು ನೋಡಿದ್ದಾರೆ. ಅವರು ನಿನ್ನ ದುರವಸ್ಥೆಯನ್ನು ನೀಗಿಸುವದಕ್ಕಾಗಿ ನಿನ್ನ ದುಷ್ಟತನ ವನ್ನು ಬಯಲಿಗೆ ತರಲಿಲ್ಲ; ಆದರೆ ನಿನಗಾಗಿ ಸುಳ್ಳಿನ ಭಾರಗಳನ್ನು ಮತ್ತು ಗಡೀಪಾರು ಮಾಡುವ ಕಾರಣ ಗಳನ್ನು ನೋಡಿದ್ದಾರೆ.

15ದಾರಿಯಲ್ಲಿ ಹೋಗುವವ ರೆಲ್ಲರೂ ನಿನ್ನ ವಿಷಯದಲ್ಲಿ ತಮ್ಮ ಕೈಗಳನ್ನು ತಟ್ಟುತ್ತಾರೆ; ಅವರು ಯೆರೂಸಲೇಮಿನ ಕುಮಾರ್ತೆಯ ವಿಷಯದಲ್ಲಿ ಸಿಳ್ಳು ಹಾಕಿ ತಲೆಯಾಡಿಸಿ--ಆ ಮನುಷ್ಯರು ಕರೆಯು ತ್ತಿದ್ದ ಸೌಂದರ್ಯದ ಸಂಪೂರ್ಣತೆಯೂ ಸರ್ವ ಭೂಮಿಯ ಸಂತೋಷವೂ ಆಗಿರುವ ನಗರಿಯು ಇದೇಯೋ?

ಪ್ರಲಾಪಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी