೧ ಸಮುವೇಲನು 14:22

ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯಿಮ್‌ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲ್ಯರು ಕೇಳಿ ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 14

20ಆಗ ಸೌಲನೂ ಅವನ ಸಂಗಡ ಇದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ ಇಗೋ, ಪ್ರತಿಯೊಬ್ಬನು ತನ್ನ ಜೊತೆಗಾರನನ್ನು ಕತ್ತಿ ಯಿಂದ ಕೊಂದುಬಿಟ್ಟದ್ದರ ಪರಿಣಾಮವಾಗಿ ಅಲ್ಲಿ ಬಹು ದೊಡ್ಡ ಸೋಲು ಉಂಟಾಯಿತು.

21ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರ ಕೂಡ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಇಬ್ರಿಯರು ಸೌಲ ಯೋನಾತಾನನ ಮತ್ತು ಇಸ್ರಾಯೇಲ್ಯರ ಸಂಗಡ ಕೂಡಿಕೊಂಡರು.

22ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯಿಮ್‌ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲ್ಯರು ಕೇಳಿ ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದರು.

23ಹೀಗೆ ಕರ್ತನು ಆ ದಿನದಲ್ಲಿ ಇಸ್ರಾಯೇಲನ್ನು ರಕ್ಷಿಸಿದನು. ಇದಲ್ಲದೆ ಆ ಯುದ್ಧವು ಬೇತಾವೆನಿನ ವರೆಗೂ ನಡೆಯಿತು.

24ಆದರೆ ಇಸ್ರಾಯೇಲ್ಯರು ಆ ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು--ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು.

೧ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी