ನಾನು ಮಾಡದೇ ಇದ್ದದ್ದನ್ನೂ ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿನ್ನ ಅಸಹ್ಯಗಳ ನಿಮಿತ್ತ ವಾಗಿ ನಿನ್ನಲ್ಲಿ ಮಾಡುತ್ತೇನೆ.
7ಆದದರಿಂದ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನೀವು, ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದದ್ದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ ನನ್ನ ನ್ಯಾಯಗಳನ್ನು ಪಾಲಿಸದೆ ಇದ್ದದರಿಂದಲೂ ನಿಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ
8ದೇವರಾದ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು, ನಾನೇ, ನಿನಗೆ ವಿರೋಧವಾಗಿದ್ದೇನೆ; ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮಧ್ಯದಲ್ಲಿ ನ್ಯಾಯತೀರ್ಪನ್ನು ಮಾಡುತ್ತೇನೆ.
9ನಾನು ಮಾಡದೇ ಇದ್ದದ್ದನ್ನೂ ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿನ್ನ ಅಸಹ್ಯಗಳ ನಿಮಿತ್ತ ವಾಗಿ ನಿನ್ನಲ್ಲಿ ಮಾಡುತ್ತೇನೆ.
10ಆದದರಿಂದ ನಿನ್ನ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು; ಮಕ್ಕಳು ಅವರ ತಂದೆಗಳನ್ನು ತಿನ್ನುವರು; ಹೀಗೆ ನಿನ್ನಲ್ಲಿ ನ್ಯಾಯ ತೀರ್ಪನ್ನು ನಡಿಸುವೆನು. ನಿನ್ನಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು.
11ಆದಕಾರಣ ನನ್ನ ಜೀವದಾಣೆ, ದೇವರಾದ ಕರ್ತನು --ನಿಶ್ಚಯವಾಗಿ ನೀನು ನನ್ನ ಪರಿಶುದ್ಧ ಸ್ಥಳವನ್ನು ನಿನ್ನ ಎಲ್ಲಾ ಹೇಸಿಗೆಗಳಿಂದಲೂ ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ ನಾನೂ ಸಹ ನಿನ್ನನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವದಿಲ್ಲ, ಇಲ್ಲವೆ ಕಟಾಕ್ಷವನ್ನು ತೋರಿಸುವದಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ