ಯೆಹೆಜ್ಕೇಲನು 18:9

ಸತ್ಯವನ್ನು ಮಾಡುವದ ಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಕೊಂಡು ಸತ್ಯಪರನಾಗಿ ನಡೆದರೆ ಅವನು ನೀತಿ ವಂತನು ಮತ್ತು ನಿಶ್ಚಯವಾಗಿ ಬದುಕುವವನು ಎಂದು ದೇವರಾದ ಕರ್ತನು ಹೇಳಿದ್ದಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 18

7ಯಾರನ್ನೂ ಉಪದ್ರಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸಿಸಿ, ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆ ಯಿರುವವನಿಗೆ ಬಟ್ಟೆಯನ್ನು ಹೊದಿಸಿ,

8ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯ ದಿಂದ ತನ್ನ ಕೈಯನ್ನು ಹಿಂತೆಗೆದು ಒಬ್ಬರಿಗೊಬ್ಬರು ಸತ್ಯದ ನ್ಯಾಯವನ್ನು ನಡಿಸಿ,

9ಸತ್ಯವನ್ನು ಮಾಡುವದ ಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಕೊಂಡು ಸತ್ಯಪರನಾಗಿ ನಡೆದರೆ ಅವನು ನೀತಿ ವಂತನು ಮತ್ತು ನಿಶ್ಚಯವಾಗಿ ಬದುಕುವವನು ಎಂದು ದೇವರಾದ ಕರ್ತನು ಹೇಳಿದ್ದಾನೆ.

10ಆದರೆ ಇಂತಹ ವನು ಪಡೆದ ಮಗನು ದರೋಡೆಕೋರನಾಗಿ ರಕ್ತವನ್ನು ಚೆಲ್ಲುವವನಾದರೆ ಇಂತಹ ಕೆಲಸಗಳನ್ನು ಮಾಡುತ್ತಾನೆ.

11ಅಂತಹ ಕೆಲಸಗಳನ್ನು ಮಾಡಿದರೂ ಪರ್ವತಗಳ ಮೇಲೆ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ,

ಯೆಹೆಜ್ಕೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी