ಯೆಶಾಯ 3:9

ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಶಾಯ 3

7ಆ ದಿನದಲ್ಲಿ ಅವನು ಆಣೆಯಿಟ್ಟು --ನಾನು ಉಪಶಮನ ಮಾಡುವವನಾಗುವದಿಲ್ಲ, ನನ್ನ ಮನೆಯಲ್ಲಿ ಅನ್ನವಾಗಲಿ ವಸ್ತ್ರವಾಗಲಿ ಇಲ್ಲ; ನನ್ನನ್ನು ಪ್ರಜಾಧಿಪತಿಯನ್ನಾಗಿ ಮಾಡಬೇಡಿರಿ ಅಂದನು.

8ಯೆರೂಸಲೇಮು ಹಾಳಾಗಿದೆ, ಯೆಹೂ ದವು ಬಿದ್ದುಹೋಗಿದೆ, ಆದದರಿಂದ ಅವರ ನಡೆನುಡಿ ಗಳು ಕರ್ತನಿಗೆ ವಿರುದ್ಧವಾಗಿ ಆತನ ಪ್ರಭಾವದ ದೃಷ್ಟಿ ಯನ್ನು ಕೆರಳಿಸುತ್ತವಲ್ಲವೇ.

9ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.

10ನೀತಿವಂತನಿಗೆ ನೀವು--ಅವನಿಗೆ ಒಳ್ಳೇದಿರಲಿ ಎಂದು ಹೇಳಿರಿ; ಅವರು ತಮ್ಮ ಕ್ರಿಯೆಗಳ ಫಲವನ್ನು ತಿನ್ನುವರು.

11ಕೆಡುಕರಿಗೆ ಅಯ್ಯೋ! ಅವರಿಗೆ ಕೇಡೇ ಇರಲಿ; ಅವನ ಕೈಗಳ ಪ್ರತಿಫಲವು ಅವನಿಗೆ ಕೊಡಲ್ಪಡುವದು.

ಯೆಶಾಯ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी