೧ ಸಮುವೇಲನು 30:4

ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 30

2ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರ ನ್ನಾದರೂ ಕಿರಿಯರನ್ನಾದರೂ ಕೊಂದುಹಾಕದೆ ಅವ ರನ್ನು ಸೆರೆಯಾಗಿ ತೆಗೆದುಕೊಂಡು ತಮ್ಮ ಮಾರ್ಗ ವಾಗಿ ಹೊರಟುಹೋದರು.

3ದಾವೀದನೂ ಅವನ ಜನರೂ ಆ ಪಟ್ಟಣಕ್ಕೆ ಬಂದಾಗ ಇಗೋ, ಅದು ಬೆಂಕಿಯಿಂದ ಸುಟ್ಟು ಹಾಕಲ್ಪಟ್ಟಿತ್ತು. ಇದಲ್ಲದೆ ಅವರ ಹೆಂಡತಿಯರೂ ಕುಮಾರರೂ ಕುಮಾರ್ತೆಯರೂ ಸೆರೆಯಾಗಿ ಒಯ್ಯಲ್ಪಟ್ಟಿದ್ದರು.

4ದಾವೀದನೂ ಅವನ ಸಂಗಡವಿದ್ದ ಜನರೂ ಅಳುವದಕ್ಕೆ ತಮ್ಮಲ್ಲಿ ಶಕ್ತಿ ಇಲ್ಲದೆ ಹೋಗುವವರೆಗೂ ಗಟ್ಟಿಯಾಗಿ ಅತ್ತರು.

5ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲಿನವಳಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಒಯ್ಯ ಲ್ಪಟ್ಟರು.

6ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.

೧ ಸಮುವೇಲನು 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी