ಅದಕ್ಕವನು--ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಕರ್ತನು ನನಗೆ ದಯಮಾಡುವನೇನೋ ಎಂದು ಉಪವಾಸಮಾಡಿ ಅತ್ತೆನು.
20ಆಗ ದಾವೀದನು ನೆಲದಿಂದ ಎದ್ದು ಸ್ನಾನಮಾಡಿ ತೈಲವನ್ನು ಹಚ್ಚಿಕೊಂಡ ವನಾಗಿ ಬದಲಿ ವಸ್ತ್ರಗಳನ್ನು ಧರಿಸಿಕೊಂಡು ಕರ್ತನ ಮಂದಿರಕ್ಕೆ ಹೋಗಿ ಆತನನ್ನು ಆರಾಧಿಸಿ ತನ್ನ ಮನೆಗೆ ಬಂದನು. ಅವನು ಕೇಳಿದಾಗ ಅವರು ಅವನ ಮುಂದೆ ಇಟ್ಟ ರೊಟ್ಟಿ ತಿಂದನು.
21ಅವನ ಸೇವಕರು ಅವನಿಗೆ --ಇದೇನು ನೀನು ಮಾಡಿದ್ದು? ಮಗುವು ಜೀವದಿಂದ ಇರುವಾಗ ನೀನು ಉಪವಾಸವಾಗಿದ್ದು ಅದಕ್ಕೋಸ್ಕರ ಅಳುತ್ತಿದ್ದಿ; ಆದರೆ ಮಗುವು ಸತ್ತಮೇಲೆ ನೀನು ಎದ್ದು ರೊಟ್ಟಿಯನ್ನು ತಿಂದಿ ಅಂದರು.
22ಅದಕ್ಕವನು--ಮಗುವು ಜೀವದಿಂದ ಇರುವಾಗ ಅದು ಬದುಕುವ ಹಾಗೆ ಕರ್ತನು ನನಗೆ ದಯಮಾಡುವನೇನೋ ಎಂದು ಉಪವಾಸಮಾಡಿ ಅತ್ತೆನು.
23ಆದರೆ ಈಗ ಸತ್ತಿದೆ ಯಲ್ಲಾ; ನಾನು ಉಪವಾಸ ಮಾಡುವದು ಯಾಕೆ? ನಾನು ಅದನ್ನು ತಿರಿಗಿ ಬರಮಾಡಬಲ್ಲೆನೋ? ನಾನು ಅದರ ಬಳಿಗೆ ಹೋಗುವೆನು; ಆದರೆ ಅದು ನನ್ನ ಬಳಿಗೆ ತಿರಿಗಿ ಬರುವದಿಲ್ಲ ಅಂದನು.
24ದಾವೀದನು ತನ್ನ ಹೆಂಡತಿಯಾದ ಬತ್ಷೆಬೆಯನ್ನು ಆದರಿಸಿ ಅವಳ ಬಳಿಗೆ ಹೋಗಿ ಅವಳ ಸಂಗಡ ಮಲಗಿದನು.ಅವಳು ಒಬ್ಬ ಮಗನನ್ನು ಹೆತ್ತಳು. ಅವನಿಗೆ ಸೊಲೊಮೋನನೆಂದು ಹೆಸರಿಟ್ಟನು. ಕರ್ತನು ಅವ ನನ್ನು ಪ್ರೀತಿಮಾಡಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ