ಯೆಹೆಜ್ಕೇಲನು 1:26

ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 1

24ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.

25ಅವುಗಳು ನಿಂತು ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸಿದಾಗ ಅವುಗಳ ತಲೆಗಳ ಮೇಲಿರುವ ಗಗನಮಂಡಲದೊಳಗಿಂದ ಒಂದು ಶಬ್ದವಾಯಿತು.

26ಅವುಗಳ ತಲೆಗಳ ಮೇಲಿರುವ ಗಗನಮಂಡಲದ ಮೇಲ್ಭಾಗದಲ್ಲಿ ಇಂದ್ರನೀಲಮಣಿಯ ಹಾಗೆ ಇರುವ ಒಂದು ಸಿಂಹಾಸನದ ರೂಪವಿತ್ತು. ಅದರ ಮೇಲೆ ಮನುಷ್ಯನ ಹಾಗೆ ಕಾಣಿಸುವ ಒಂದು ರೂಪವೂ ಇತ್ತು.

27ಆತನ ನಡುವು ಕಾಣಿಸುವಂತೆ ಮೇಲೆಯೂ ಒಳಗೂ ಸುತ್ತಲೂ ಬೆಂಕಿಯಂತೆ ಇರುವ ಸುಂದರವಾದ ಒಂದು ಬಣ್ಣದ ರೂಪವು ಇರುವದನ್ನು ನಾನು ನೋಡಿದೆನು; ಆತನ ನಡುವು ಕಾಣಿಸುವಂತೆ ಕೆಳಗೆ ಬೆಂಕಿಯ ಹಾಗೆ ಅದರ ಸುತ್ತಲೂ ಪ್ರಕಾಶವಿರುವದನ್ನು ನೋಡಿದೆನು.

28ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.

ಯೆಹೆಜ್ಕೇಲನು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी