ಯೆಹೆಜ್ಕೇಲನು 21:13

ಇದು ಒಂದು ಶೋಧನೆ; ಕತ್ತಿಯು ತಿರಸ್ಕರಿಸಲ್ಪಟ್ಟಿದ್ದೇ; ಕೋಲು ಸಹ ತಿರಸ್ಕಾರವಾದರೆ ಗತಿಯೇನು? ಅದು ಇನ್ನು ಆಗದು ಎಂದು ದೇವರಾದ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 21

11ಕೈಗೆ ಸಿದ್ದವಾಗುವಂತೆ ಅವನು ಅದನ್ನು ಮಸೆಯುವದಕ್ಕೆ ಕೊಟ್ಟಿದ್ದಾನೆ; ಕೊಲ್ಲುವವನ ಕೈಗೆ ಕೊಡುವ ಹಾಗೆ ಆ ಕತ್ತಿಗೆ ಹದವನ್ನೂ ಸಾಣೆಯನ್ನೂ ಮಾಡಲಾಗಿದೆ.

12ಮನುಷ್ಯಪುತ್ರನೇ, ಕೂಗು ಮತ್ತು ಗೋಳಾಡು; ಇದು ನನ್ನ ಜನರ ಮೇಲೆಯೂ ಇಸ್ರಾಯೇಲಿನ ಎಲ್ಲಾ ಅಧಿಪತಿಗಳ ಮೇಲೆಯೂ ಇರುವದು; ಕತ್ತಿಯ ಮುಖಾಂತರ ಅಂಜಿಕೆಯು ನನ್ನ ಜನರ ಮೇಲೆ ಬರುವದು. ಆದದರಿಂದ ತೊಡೆಯನ್ನು ಬಡಿದುಕೋ.

13ಇದು ಒಂದು ಶೋಧನೆ; ಕತ್ತಿಯು ತಿರಸ್ಕರಿಸಲ್ಪಟ್ಟಿದ್ದೇ; ಕೋಲು ಸಹ ತಿರಸ್ಕಾರವಾದರೆ ಗತಿಯೇನು? ಅದು ಇನ್ನು ಆಗದು ಎಂದು ದೇವರಾದ ಕರ್ತನು ಹೇಳುತ್ತಾನೆ.

14ಆದದರಿಂದ ಮನುಷ್ಯ ಪುತ್ರನೇ ನೀನು ಚಪ್ಪಾಳೆ ತಟ್ಟಿ ಪ್ರವಾದಿಸು; ಹತ ರಾದವರ ಕತ್ತಿಯು ಮೂರನೆಯ ಸಾರಿಯೂ ಎರಡ ರಷ್ಟು ಮಾಡಲಿ; ಅದು ತಮ್ಮ ರಹಸ್ಯ ಕೋಣೆಗಳಲ್ಲಿ ಪ್ರವೇಶಿಸಿ ಮಹಾ ಪ್ರಜೆಗಳನ್ನು ಸಂಹರಿಸಿದ ಕತ್ತಿಯೇ.

15ಅವರ ಹೃದಯವು ಕುಂದುವ ಹಾಗೆಯೂ ಅವರ ಎಲ್ಲಾ ಬಾಗಿಲುಗಳಲ್ಲಿ ಬೀಳೋಣವು ಹೆಚ್ಚಾಗುವ ಹಾಗೆಯೂ ಕತ್ತಿಯ ಮೊನೆಯನ್ನಿಟ್ಟಿದ್ದೇನೆ; ಹಾ, ಅದು ಥಳಥಳಿಸುತ್ತಿದೆ, ಕೊಲೆ ಮಾಡುವದಕ್ಕೆ ಮಸಿಯಲ್ಪಟ್ಟಿದೆ.

ಯೆಹೆಜ್ಕೇಲನು 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी