ಯೆಶಾಯ 39:1

ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರಗ ಳನ್ನೂ ಬಹುಮಾನವನ್ನೂ ಕಳುಹಿಸಿದನು.

ಸಂದರ್ಭದೊಂದಿಗೆ ಓದಿ · ಯೆಶಾಯ 39

1ಅದೇ ಕಾಲದಲ್ಲಿ ಬಲದಾನನ ಮಗನೂ ಬಾಬೆಲಿನ ಅರಸನೂ ಆದ ಮೆರೋದಕ ಬಲದಾನನೆಂಬವನು ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿ ಅವನಿಗೆ ಪತ್ರಗ ಳನ್ನೂ ಬಹುಮಾನವನ್ನೂ ಕಳುಹಿಸಿದನು.

2ಹಿಜ್ಕೀ ಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದ ಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ ಆಯುಧಶಾಲೆಯನ್ನೂ ತನ್ನ ಭಂಡಾರದಲ್ಲಿದ್ದದ್ದೆಲ್ಲ ವನ್ನೂ ತೋರಿಸಿದನು; ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.

3ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀ ಯನ ಬಳಿಗೆ ಬಂದು ಅವನಿಗೆ--ಈ ಮನುಷ್ಯರು ಎಲ್ಲಿಂದ ನಿನ್ನ ಬಳಿಗೆ ಬಂದರು, ಅವರು ನಿನಗೆ ಏನು ಹೇಳಿದರು ಎಂದು ಕೇಳಲು, ಹಿಜ್ಕೀಯನು--ಅವರು ಬಹುದೂರ ದೇಶವಾದ ಬಾಬೆಲಿನಿಂದ ಬಂದರು ಎಂದು ಹೇಳಿದನು.

ಯೆಶಾಯ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी