ಎಫೆಸದವರಿಗೆ 1:11

ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.

ಸಂದರ್ಭದೊಂದಿಗೆ ಓದಿ · ಎಫೆಸದವರಿಗೆ 1

9ಆತನು ತನ್ನಲ್ಲಿ ಉದ್ದೇಶಿಸಿದ ಪ್ರಕಾರ ಆನಂದಪೂರ್ವಕವಾದ ತನ್ನ ಚಿತ್ತದ ರಹಸ್ಯವನ್ನು ನಮಗೆ ತಿಳಿಯಪಡಿಸಿದನು.

10ಅದೇನಂದರೆ ಕಾಲವು ಪರಿಪೂರ್ಣವಾದ ಯುಗದಲ್ಲಿ ಆತನು ಪರಲೋಕದಲ್ಲಿರುವವುಗಳನ್ನೂ ಭೂ ಲೋಕದಲ್ಲಿರುವವುಗಳನ್ನೂ ಆತನಲ್ಲಿ ಅಂದರೆ ಕ್ರಿಸ್ತನಲ್ಲಿ ಎಲ್ಲವನ್ನು ಒಂದುಗೂಡಿಸಬೇಕೆಂದಿದ್ದನು.

11ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.

12ಕ್ರಿಸ್ತನ ಮಹಿಮೆಯು ಸ್ತುತಿಸಲ್ಪಡುವಂತೆ ಆತನಲ್ಲಿ ನಾವು ಮೊದಲು ನಂಬಿಕೆಯಿಟ್ಟೆವು.

13ನಿಮ್ಮ ರಕ್ಷಣೆಯ ವಿಷಯವಾದ ಸುವಾರ್ತೆಯೆಂಬ ಸತ್ಯ ವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದಿರಿ.

ಎಫೆಸದವರಿಗೆ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी