ಯೆಹೆಜ್ಕೇಲನು 16:25

ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

23ಇದಲ್ಲದೆ ಈ ನಿನ್ನ ಎಲ್ಲಾ ಕೆಟ್ಟತನಗಳ ತರುವಾಯ ಆಗಿದ್ದೇನಂದರೆ (ಅಯ್ಯೋ! ಅಯ್ಯೋ ಎಂದು ನಿನಗೆ ದೇವರಾದ ಕರ್ತನು ಹೇಳುತ್ತಾನೆ;)

24ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ.

25ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ.

26ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ.

27ಆದದರಿಂದ ಇಗೋ, ನಾನು ನನ್ನ ಕೈಯನ್ನು ನಿನ್ನ ಮೇಲೆ ಚಾಚಿ ನಿನ್ನ ಸಾಮಾನ್ಯವಾದ ಆಹಾರವನ್ನು ಕಡಿಮೆಮಾಡಿದೆ; ನಿನ್ನ ದುರ್ಮಾರ್ಗಕ್ಕೆ ನಾಚಿಕೆಪಟ್ಟು ನಿನ್ನ ಕೆಟ್ಟ ನಡತೆಗೆ ಅಸಹ್ಯಪಡುವವರಾದ ಫಿಲಿಷ್ಟಿಯರ ಕುಮಾರ್ತೆಯರ ಚಿತ್ತಕ್ಕೆ ನಿನ್ನನ್ನು ಒಪ್ಪಿಸಿಬಿಟ್ಟೆ.

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी