ಯೆರೆಮಿಯ 6:8

ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ ನಾನು ನಿಮ್ಮನ್ನು ಹಾಳಾಗಿಯೂ ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತಕ್ಕೋ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 6

6ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಮರಗಳನ್ನು ಕಡಿಯಿರಿ; ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ; ವಿಚಾರಿಸಲ್ಪಡತಕ್ಕ ಪಟ್ಟಣವು ಇದೇ; ಅವಳಲ್ಲಿ ತುಂಬ ಬಲಾತ್ಕಾರ ಅದೆ.

7ಬುಗ್ಗೆಯು ತನ್ನ ನೀರನ್ನು ಹರಿಯ ಮಾಡುವ ಹಾಗೆ ಅವಳು ತನ್ನ ಕೆಟ್ಟತನವನ್ನು ಹರಿಯ ಮಾಡುತ್ತಾಳೆ; ಬಲಾತ್ಕಾರವೂ ಸುಲಿಗೆಯೂ ಅವಳಲ್ಲಿ ಕೇಳಬರುತ್ತವೆ. ದುಃಖವೂ ಗಾಯಗಳೂ ಯಾವಾ ಗಲೂ ನನ್ನ ಮುಂದೆ ಅವೆ.

8ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ ನಾನು ನಿಮ್ಮನ್ನು ಹಾಳಾಗಿಯೂ ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತಕ್ಕೋ.

9ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಸ್ರಾ ಯೇಲಿನ ಶೇಷವನ್ನು ದ್ರಾಕ್ಷೇಗಿಡದ ಹಾಗೆ ಪೂರ್ಣ ವಾಗಿ ಹಕ್ಕಲಾಯುವರು, ದ್ರಾಕ್ಷೇ ಕೂಡಿಸುವವನ ಹಾಗೆ ನಿನ್ನ ಕೈಯನ್ನು ಪುಟ್ಟಿಗಳಲ್ಲಿ ಹಿಂದಕ್ಕೆ ತಿರುಗಿಸು.

10ನಾನು ಯಾರ ಸಂಗಡ ಮಾತನಾಡಲಿ? ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ? ಇಗೋ, ಅವರು ಆಲೈಸಲಾರದ ಹಾಗೆ ಅವರ ಕಿವಿ ಪರಿಛೇದನೆ ಯಿಲ್ಲದಾಗಿದೆ; ಇಗೋ, ಕರ್ತನ ವಾಕ್ಯವು ಅವರಿಗೆ ನಿಂದೆಯಾಗಿದೆ, ಅದರಲ್ಲಿ ಅವರಿಗೆ ಸಂತೋಷವಿಲ್ಲ.

ಯೆರೆಮಿಯ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी