ಯೆಹೋಶುವ 10:18

ಆಗ ಯೆಹೋಶು ವನು--ದೊಡ್ಡ ಕಲ್ಲುಗಳನ್ನು ಗವಿಯ ಬಾಯಿಗೆ ಉರುಳಿಸಿರಿ, ಆ ಸ್ಥಳದಲ್ಲಿ ಅವರನ್ನು ಕಾಯುವಂತೆ ಮನುಷ್ಯರನ್ನು ಇಡಿರಿ.

ಸಂದರ್ಭದೊಂದಿಗೆ ಓದಿ · ಯೆಹೋಶುವ 10

16ಆದರೆ ಆ ಐದು ಮಂದಿ ಅರಸುಗಳು ಓಡಿಹೋಗಿ ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡರು.

17ಆ ಐದು ಮಂದಿ ಅರಸುಗಳು ಮಕ್ಕೇದದಲ್ಲಿರುವ ಒಂದು ಗವಿಯಲ್ಲಿ ಅಡಗಿಕೊಂಡವರಾಗಿ ಸಿಕ್ಕಿದರೆಂದು ಯೆಹೋಶುವನಿಗೆ ತಿಳಿಸಲ್ಪಟ್ಟಿತು.

18ಆಗ ಯೆಹೋಶು ವನು--ದೊಡ್ಡ ಕಲ್ಲುಗಳನ್ನು ಗವಿಯ ಬಾಯಿಗೆ ಉರುಳಿಸಿರಿ, ಆ ಸ್ಥಳದಲ್ಲಿ ಅವರನ್ನು ಕಾಯುವಂತೆ ಮನುಷ್ಯರನ್ನು ಇಡಿರಿ.

19ನೀವು ನಿಲ್ಲಬೇಡಿರಿ, ನಿಮ್ಮ ಶತ್ರುಗಳನ್ನು ಹಿಂದಟ್ಟಿರಿ, ಹಿಂದಾದ ವೈರಿಗಳನ್ನು ಸಂಹರಿಸಿರಿ. ತಮ್ಮ ಪಟ್ಟಣಗಳಲ್ಲಿ ಪ್ರವೇಶಿಸದಂತೆ ಮಾಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾನೆ ಅಂದನು.

20ಯೆಹೋಶುವನೂ ಇಸ್ರಾಯೇಲ್‌ ಮಕ್ಕಳೂ ಅವರನ್ನು ಕೊಲ್ಲುವ ವರೆಗೂ ದೊಡ್ಡ ಸಂಹಾರದಿಂದ ಸಂಹರಿಸಿಬಿಟ್ಟ ತರುವಾಯ ಅವರಲ್ಲಿ ಉಳಿದವರು ಕೋಟೆಗಳುಳ್ಳ ಪಟ್ಟಣಗಳಲ್ಲಿ ಸೇರಿದರು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी