ಅಪೊಸ್ತಲರ ಕೃತ್ಯಗಳು 25:21

ಆದರೆ ಔಗುಸ್ತನ ವಿಚಾರಣೆಗಾಗಿ ತನ್ನನ್ನು ಕಾಯಬೇಕೆಂದು ಪೌಲನು ಬೇಡಿಕೊಂಡ ಪ್ರಕಾರ ಕೈಸರನ ಬಳಿಗೆ ಅವನನ್ನು ನಾನು ಕಳುಹಿಸುವ ವರೆಗೆ ಕಾಯಬೇಕೆಂದು ನಾನು ಅಪ್ಪಣೆಕೊಟ್ಟೆನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 25

19ಆದರೆ ಸತ್ತುಹೋದ ಒಬ್ಬ ಯೇಸು ಬದುಕಿದ್ದಾನೆ ಎಂದು ಪೌಲನು ಸ್ಥಾಪಿಸಿರುವ ವಿಷಯವಾಗಿಯೂ ತಮ್ಮ ಮೂಢಭಕ್ತಿಯ ವಿಷಯವಾಗಿಯೂ ಕೆಲವು ಪ್ರಶ್ನೆಗಳು ಅವನಿಗೆ ವಿರೋಧವಾಗಿ ಅವರಿಗೆ ಇದ್ದವು.

20ನಾನು ಅಂಥಾ ವಿಧವಾದ ಪ್ರಶ್ನೆಗಳ ವಿಷಯವಾಗಿ ಸಂದೇಹ ಪಟ್ಟದ್ದರಿಂದ ಅವನು ಯೆರೂಸಲೇಮಿಗೆ ಬಂದು ಇವುಗಳ ವಿಷಯವಾಗಿ ವಿಚಾರಿಸಲ್ಪಡುವದು ತನಗೆ ಇಷ್ಟವಿದೆಯೋ ಎಂದು ನಾನು ಕೇಳಿದೆನು.

21ಆದರೆ ಔಗುಸ್ತನ ವಿಚಾರಣೆಗಾಗಿ ತನ್ನನ್ನು ಕಾಯಬೇಕೆಂದು ಪೌಲನು ಬೇಡಿಕೊಂಡ ಪ್ರಕಾರ ಕೈಸರನ ಬಳಿಗೆ ಅವನನ್ನು ನಾನು ಕಳುಹಿಸುವ ವರೆಗೆ ಕಾಯಬೇಕೆಂದು ನಾನು ಅಪ್ಪಣೆಕೊಟ್ಟೆನು.

22ಆಗ ಅಗ್ರಿಪ್ಪನು ಫೆಸ್ತನಿಗೆ--ಆ ಮನುಷ್ಯನು ಹೇಳುವದನ್ನು ಕೇಳುವದಕ್ಕೆ ನಾನು ಸಹ ಇಷ್ಟಪಡುತ್ತೇನೆ ಎಂದು ಹೇಳಿದನು. ಅದಕ್ಕೆ ಅವನು--ಅವನು ಹೇಳುವದನ್ನು ನಾಳೆ ನೀನು ಕೇಳುವಿ ಅಂದನು.

23ಮಾರನೆಯ ದಿನ ಅಗ್ರಿಪ್ಪನೂ ಬೆರ್ನಿಕೆಯೂ ಬಹು ಆಡಂಬರದೊಂದಿಗೆ ಬಂದು ಮುಖ್ಯನಾಯಕ ರೊಂದಿಗೂ ಪಟ್ಟಣದ ಪ್ರಮುಖರೊಂದಿಗೂ ವಿಚಾ ರಣೆಯ ಸ್ಥಳಕ್ಕೆ ಪ್ರವೇಶಿಸಿದಾಗ ಫೆಸ್ತನ ಅಪ್ಪಣೆಯ ಪ್ರಕಾರ ಪೌಲನನ್ನು ಕರತಂದರು.

ಅಪೊಸ್ತಲರ ಕೃತ್ಯಗಳು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी