ಮಿಕ 1:8

ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.

ಸಂದರ್ಭದೊಂದಿಗೆ ಓದಿ · ಮಿಕ 1

6ಹೀಗಿರುವದರಿಂದ ನಾನು ಸಮಾರ್ಯವನ್ನು ಹೊಲದ ದಿಬ್ಬೆಯಾಗಿಯೂ ದ್ರಾಕ್ಷೇ ಬಳ್ಳಿ ನೆಡುವ ಸ್ಥಳವಾಗಿಯೂ ಮಾಡುವೆನು; ಅದರ ಕಲ್ಲುಗಳನ್ನು ತಗ್ಗಿನಲ್ಲಿ ಸುರಿದುಬಿಟ್ಟು; ಅದರ ಅಸ್ತಿವಾರಗಳನ್ನು ಹೊರ ಗೆಡುವೆನು.

7ಅದರ ಕೆತ್ತಿದ ವಿಗ್ರಹಗಳೆಲ್ಲಾ ತುಂಡು ಗಳಾಗುವಂತೆ ಒಡೆಯಲ್ಪಡುವವು. ಅದಕ್ಕೆ ಆದ ಸಂಪಾದನೆಗಳೆಲ್ಲಾ ಬೆಂಕಿಯಿಂದ ಸುಡಲ್ಪಡುವವು; ಅದರ ವಿಗ್ರಹಗಳನ್ನೆಲ್ಲಾ ಹಾಳುಮಾಡುವೆನು; ಸೂಳೆಯ ಕೂಲಿಯಿಂದ ಅವುಗಳನ್ನು ಕೂಡಿಸಿ ಕೊಂಡಿತು, ಸೂಳೆಯ ಕೂಲಿಗೆ ಅವು ತಿರುಗುವವು.

8ಆದದರಿಂದ ನಾನು ಗೋಳಾಡಿ ಅರಚುವೆನು; ಬರಿಗಾಲಾಗಿಯೂ ಬೆತ್ತಲೆಯಾಗಿಯೂ ಹೋಗುವೆನು; ನರಿಗಳ ಹಾಗೆ ಗೋಳಾಡುವೆನು; ಬಕಪಕ್ಷಿಯಂತೆ ದುಃಖಪಡುವೆನು.

9ಅದರ ಗಾಯವು ಗುಣವಾಗ ದಂಥದ್ದು, ಯಾಕಂದರೆ ಅದು ಯೆಹೂದಕ್ಕೆ ಬಂತು; ನನ್ನ ಜನರ ಬಾಗಲಿಗೂ ಯೆರೂಸಲೇಮಿನ ಮಟ್ಟಿಗೂ ಮುಟ್ಟಿದ್ದಾನೆ.

10ಗತ್‌ ಊರಿನಲ್ಲಿ ಅದನ್ನು ತಿಳಿಸಬೇಡ; ಸ್ವಲ್ಪವಾದರೂ ಅಳಬೇಡ; ಎಫ್ರಾತದ ಮನೆಯ ಧೂಳಿನಲ್ಲಿ ಹೊರಳಾಡು.

ಮಿಕ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी