ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ; ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
13ಇಗೋ, ಮೇಘಗಳ ಹಾಗೆ ಏರಿ ಬರುವನು; ಆತನ ರಥಗಳು ಬಿರುಗಾಳಿಯ ಹಾಗೆ ಇರುವವು, ಆತನ ಕುದುರೆಗಳು ಹದ್ದುಗಳಿಗಿಂತ ತೀವ್ರವಾಗಿವೆ. ನಮಗೆ ಅಯ್ಯೋ, ಹಾಳಾದೆವು.
14ಯೆರೂಸಲೇಮೇ, ನೀನು ರಕ್ಷಿಸಲ್ಪಡುವ ಹಾಗೆ ನಿನ್ನ ಹೃದಯವನ್ನು ಕೆಟ್ಟತನದಿಂದ ತೊಳೆದುಕೋ; ನಿನ್ನ ವ್ಯರ್ಥ ಆಲೋಚನೆಗಳು ಎಷ್ಟರ ವರೆಗೆ ನಿನ್ನಲ್ಲಿ ತಂಗುವವು?
15ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ; ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.
16ಜನಾಂಗಗಳಿಗೆ ತಿಳಿಸಿರಿ. ಇಗೋ, ಯೆರೂಸಲೇಮಿಗೆ ವಿರೋಧವಾಗಿ ತಿಳಿಯ ಪಡಿಸಿರಿ; ಏನಂದರೆ ಮುತ್ತಿಗೆ ಹಾಕುವವರು ದೂರ ದೇಶದಿಂದ ಬರುತ್ತಾರೆ, ಯೆಹೂದದ ಪಟ್ಟಣಗಳಿಗೆ ವಿರೋಧವಾಗಿ ತಮ್ಮ ಸ್ವರವನ್ನೆತ್ತುತ್ತಾರೆ.
17ಹೊಲ ಕಾಯುವವರಂತೆ ಸುತ್ತಲಾಗಿ ಅವಳಿಗೆ ವಿರೋಧವಾಗಿ ದ್ದಾರೆ; ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾಳೆಂದು ಕರ್ತನು ಅನ್ನುತ್ತಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ