ಆದಿಕಾಂಡ 48:8

ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ--ಇವರು ಯಾರು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 48

6ಆದರೆ ಅವರ ತರುವಾಯ ನಿನ್ನಿಂದ ಹುಟ್ಟುವ ಸಂತಾನವು ನಿನ್ನದಾಗಿರಲಿ. ಅವರು ತಮ್ಮ ತಮ್ಮ ಬಾಧ್ಯತೆಯಲ್ಲಿ ತಮ್ಮ ಸಹೋದರರ ಹೆಸರುಗಳ ಪ್ರಕಾರ ಕರೆಯಲ್ಪಡಲಿ.

7ನಾನು ಪದ್ದನ್‌ ಅರಾಮಿನಿಂದ ಬಂದಾಗ ಕಾನಾನ್‌ದೇಶದಲ್ಲಿ ಎಫ್ರಾ ತಿಗೆ ಸ್ವಲ್ಪ ದೂರದಲ್ಲಿರುವಾಗ ರಾಹೇಲಳು ನನ್ನ ಬಳಿಯಲ್ಲಿ ಸತ್ತಳು. ಅಲ್ಲಿ ಅಂದರೆ ಬೇತ್ಲೆಹೇಮೆಂಬ ಎಫ್ರಾತಿನ ಮಾರ್ಗದಲ್ಲಿ ಆಕೆಯನ್ನು ಹೂಣಿಟ್ಟೆನು ಅಂದನು.

8ಆಗ ಇಸ್ರಾಯೇಲನು ಯೋಸೇಫನ ಮಕ್ಕಳನ್ನು ನೋಡಿ--ಇವರು ಯಾರು ಅಂದನು.

9ಅದಕ್ಕೆ ಯೋಸೇಫನು ತನ್ನ ತಂದೆಗೆ--ದೇವರು ಈ ಸ್ಥಳದಲ್ಲಿ ನನಗೆ ಕೊಟ್ಟ ನನ್ನ ಕುಮಾರರು ಅಂದನು. ಆಗ ಅವನು ಅವರನ್ನು ನನ್ನ ಬಳಿಗೆ ಕರಕೊಂಡು ಬಾ. ನಾನು ಅವರನ್ನು ಆಶೀರ್ವದಿಸುತ್ತೇನೆ ಅಂದನು.

10ಆದರೆ ಇಸ್ರಾಯೇಲನು ಮುದುಕನಾಗಿದ್ದದರಿಂದ ಅವನ ಕಣ್ಣುಗಳು ಕಾಣದಷ್ಟು ಮೊಬ್ಬಾಗಿದ್ದವು. ಆಗ ಅವನು ಅವರನ್ನು ಯಾಕೋಬನ ಸವಿಾಪಕ್ಕೆ ತಂದಾಗ ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.

ಆದಿಕಾಂಡ 48 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी