ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.
3ನಿನ್ನನ್ನು ಹೆಸರು ಹಿಡಿದು ಕರೆಯುವ ಕರ್ತನು ನಾನೇ, ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ ಗುಪ್ತ ಸ್ಥಳಗಳಲ್ಲಿ ಮರೆ ಮಾಡಿದ ನಿಧಿ ನಿಕ್ಷೇಪಗಳನ್ನೂ ನಿನಗೆ ಕೊಡುವೆನು.
4ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ.
5ನಾನೇ ಕರ್ತನು, ಮತ್ತೊಬ್ಬನಿಲ್ಲ; ನನ್ನ ಹೊರತು ಯಾವ ದೇವರೂ ಇಲ್ಲ; ನೀನು ನನ್ನನ್ನು ಅರಿಯದನಾಗಿದ್ದರೂ ನಿನಗೆ ನಡುಕಟ್ಟುವೆನು.
6ಮೂಡಣದಿಂದ ಪಡುವಣದ ವರೆಗೆ ಇರುವವರೆಲ್ಲರೂ ತಿಳಿದುಕೊಳ್ಳುವಂತೆ ನನ್ನ ಹೊರತು ಯಾರೂ ಇಲ್ಲ, ನಾನೇ ಕರ್ತನು ಮತ್ತೊ ಬ್ಬನು ಇಲ್ಲ.
7ನಾನು ಬೆಳಕನ್ನು ರೂಪಿಸುವವನೂ ಕತ್ತಲನ್ನು ನಿರ್ಮಿಸುವವನೂ ಸಮಾಧಾನವನ್ನು ಮಾಡು ವವನೂ ಕೆಟ್ಟದ್ದನ್ನು ನಿರ್ಮಿಸುವವನೂ ನಾನೇ; ಕರ್ತ ನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ