ಓಬದ್ಯ 1:19

ದಕ್ಷಿಣದವರು ಏಸಾವನ ಬೆಟ್ಟವನ್ನೂ ಬೈಲಿನವರು ಫಿಲಿಷ್ಟಿಯರನ್ನೂ ಸ್ವತಂತ್ರಿಸಿಕೊಳ್ಳುವರು; ಎಫ್ರಾಯಾಮಿನ ಹೊಲ ಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನ ಮಾಡಿಕೊಳ್ಳುವರು ಮತ್ತು ಬೆನ್ಯಾವಿಾನನು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವನು.

ಸಂದರ್ಭದೊಂದಿಗೆ ಓದಿ · ಓಬದ್ಯ 1

17ಆದರೆ ಚೀಯೋನ್‌ ಪರ್ವತದಲ್ಲಿ ಬಿಡುಗಡೆ ಇರುವದು, ಅದು ಪರಿಶುದ್ಧ ವಾಗಿರುವದು; ಯಾಕೋಬಿನ ಮನೆತನದವರು ತಮ್ಮ ಸ್ವಾಸ್ತ್ಯಗಳನ್ನು ಸ್ವತಂತ್ರಿಸಿಕೊಳ್ಳುವರು.

18ಇದಲ್ಲದೆ ಯಾಕೋಬಿನ ಮನೆತನದವರು ಬೆಂಕಿಯಾಗಿಯೂ ಯೋಸೇಫನ ಮನೆತನದವರು ಜ್ವಾಲೆಯಾಗಿಯೂ ಇರುವರು; ಏಸಾವನ ಮನೆತನದವರು ಕೂಳೆಯಾಗು ವರು. ಅವರು ಹೊತ್ತಿಸಿ ಇವರನ್ನು ತಿಂದುಬಿಡುವರು; ಏಸಾವನ ಮನೆತನದವರಿಗೆ ಯಾರೂ ಉಳಿಯರು; ಕರ್ತನೇ ಅದನ್ನು ನುಡಿದಿದ್ದಾನೆ.

19ದಕ್ಷಿಣದವರು ಏಸಾವನ ಬೆಟ್ಟವನ್ನೂ ಬೈಲಿನವರು ಫಿಲಿಷ್ಟಿಯರನ್ನೂ ಸ್ವತಂತ್ರಿಸಿಕೊಳ್ಳುವರು; ಎಫ್ರಾಯಾಮಿನ ಹೊಲ ಗಳನ್ನು ಸಮಾರ್ಯದ ಹೊಲಗಳನ್ನು ಸಹ ಸ್ವಾಧೀನ ಮಾಡಿಕೊಳ್ಳುವರು ಮತ್ತು ಬೆನ್ಯಾವಿಾನನು ಗಿಲ್ಯಾದನ್ನು ಸ್ವತಂತ್ರಿಸಿಕೊಳ್ಳುವನು.

20ಇದಲ್ಲದೆ ಚಾರೆಪತಿನ ವರೆಗೂ ಕಾನಾನ್ಯರಲ್ಲಿರುವ ಇಸ್ರಾಯೇಲನ ಮಕ್ಕಳ ಈ ಸೈನ್ಯದ ಸೆರೆಯವರು ಸೆಫರಾದಿನಲ್ಲಿರುವ ಯೆರೂ ಸಲೇಮಿನ ಸೆರೆಯವರು ದಕ್ಷಿಣದ ಪಟ್ಟಣಗಳನ್ನು ಸ್ವಾಧೀ ನಮಾಡಿಕೊಳ್ಳುವರು.

21ಇದಲ್ಲದೆ ಚೀಯೋನ್‌ ಪರ್ವತದಲ್ಲಿ ರಕ್ಷಕರು ಏಸಾವಿನ ಬೆಟ್ಟಕ್ಕೆ ನ್ಯಾಯ ತೀರಿಸುವದಕ್ಕೋಸ್ಕರ ಏಳುವರು; ಆಗ ರಾಜ್ಯವು ಕರ್ತನದಾಗಿರುವದು.

ಓಬದ್ಯ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी