ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ.
15ಅಗ್ನಿ ಸರ್ಪಗಳೂ ಚೇಳುಗಳೂ ಬರವೂ ಉಳ್ಳ ನೀರಿಲ್ಲದ ಆ ಮಹಾ ಭಯಂಕರವಾದ ಅರಣ್ಯದಲ್ಲಿ ನಿನ್ನನ್ನು ನಡಿಸಿದಂಥ, ಬಿಳೀಕಲ್ಲಿನ ಬಂಡೆಯೊಳಗಿಂದ ನಿನಗೆ ನೀರು ಬರ ಮಾಡಿದಂಥ,
16ನಿನ್ನನ್ನು ಕುಂದಿಸಿ ಶೋಧಿಸಿ ಕಡೆಯಲ್ಲಿ ನಿನಗೆ ಒಳ್ಳೇದನ್ನು ಮಾಡುವಂತೆ, ನಿನ್ನ ಪಿತೃಗಳು ಅರಿಯದ ಮನ್ನವನ್ನು ಅರಣ್ಯದಲ್ಲಿ ನಿನಗೆ ತಿನ್ನಿಸಿ ದಂಥ ನಿನ್ನ ದೇವರಾದ ಕರ್ತನನ್ನು ಮರೆತು--
17ನನ್ನ ಬಲವೇ ಮತ್ತು ನನ್ನ ಕೈಯ ಸಾಮರ್ಥ್ಯವೇ ನನಗೆ ಈ ಆಸ್ತಿಯನ್ನು ಸಂಪಾದಿಸಿತೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೋ.
18ನಿನ್ನ ದೇವ ರಾದ ಕರ್ತನನ್ನು ಜ್ಞಾಪಕಮಾಡಿಕೊಳ್ಳಬೇಕು; ಈ ಹೊತ್ತು ಇರುವಂತೆ ನಿನ್ನ ಪಿತೃಗಳಿಗೆ ಪ್ರಮಾಣಮಾಡಿದ ತನ್ನ ಒಡಂಬಡಿಕೆಯನ್ನು ಸ್ಥಾಪಿಸುವ ಹಾಗೆ ಆಸ್ತಿಯನ್ನು ಸಂಪಾದಿಸುವ ಬಲವನ್ನು ನಿನಗೆ ಕೊಡುವಾತನು ಆತನೇ.
19ನೀನು ಹೇಗಾದರೂ ನಿನ್ನ ದೇವರಾದ ಕರ್ತನನ್ನು ಮರೆತು ಬೇರೆ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಸೇವಿಸಿ ಅವುಗಳಿಗೆ ಅಡ್ಡಬಿದ್ದರೆ ನೀವು ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧ ವಾಗಿ ಈಹೊತ್ತು ಸಾಕ್ಷಿ ಹೇಳುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ