ಯೋವೇಲ 2:7

ಶೂರರ ಹಾಗೆ ಓಡುತ್ತಾರೆ; ಯುದ್ಧ ಶಾಲಿಗಳ ಹಾಗೆ ಗೋಡೆ ಏರುತ್ತಾರೆ; ಒಬ್ಬೊಬ್ಬನು ತನ್ನ ತನ್ನ ಮಾರ್ಗದಲ್ಲಿ ಹೋಗುತ್ತಾನೆ; ತಮ್ಮ ಹಾದಿ ಗಳನ್ನು ಬದಲು ಮಾಡುವದಿಲ್ಲ.

ಸಂದರ್ಭದೊಂದಿಗೆ ಓದಿ · ಯೋವೇಲ 2

5ಪರ್ವತಾಗ್ರಗಳಲ್ಲಿ ರಥಗಳ ಶಬ್ದದಂತೆ ಹಾರುತ್ತಾರೆ; ಕೂಳೆಯನ್ನು ದಹಿಸುವ ಬೆಂಕಿಯ ಜ್ವಾಲೆಯ ಶಬ್ದದ ಹಾಗೆಯೂ ಯುದ್ಧಕ್ಕೆ ಸಿದ್ಧವಾದ ಬಲವುಳ್ಳ ಜನರ ಹಾಗೆಯೂ

6ಅವರ ಮುಂದೆ ಜನರು ಬಹಳವಾಗಿ ನೊಂದುಕೊಳ್ಳುತ್ತಾರೆ. ಎಲ್ಲಾ ಮುಖಗಳು ಕಳೆಗುಂದುತ್ತವೆ.

7ಶೂರರ ಹಾಗೆ ಓಡುತ್ತಾರೆ; ಯುದ್ಧ ಶಾಲಿಗಳ ಹಾಗೆ ಗೋಡೆ ಏರುತ್ತಾರೆ; ಒಬ್ಬೊಬ್ಬನು ತನ್ನ ತನ್ನ ಮಾರ್ಗದಲ್ಲಿ ಹೋಗುತ್ತಾನೆ; ತಮ್ಮ ಹಾದಿ ಗಳನ್ನು ಬದಲು ಮಾಡುವದಿಲ್ಲ.

8ಒಬ್ಬನು ಇನ್ನೊಬ್ಬ ನನ್ನು ನೂಕುವದಿಲ್ಲ; ಅವರಲ್ಲಿ ಪ್ರತಿಯೊಬ್ಬನು ತನ್ನ ತನ್ನ ದಾರಿಯಲ್ಲಿ ಹೋಗುತ್ತಾನೆ; ಆಯುಧಗಳಲ್ಲಿ ಬಿದ್ದರೂ ಗಾಯವಾಗುವದಿಲ್ಲ.

9ಪಟ್ಟಣದಲ್ಲಿ ಅತ್ತಿತ್ತ ತಿರುಗಾಡುತ್ತಾರೆ; ಗೋಡೆಯ ಮೇಲೆ ಓಡುತ್ತಾರೆ; ಮನೆಗಳ ಮೇಲೆ ಹತ್ತುತ್ತಾರೆ; ಕಳ್ಳನ ಹಾಗೆ ಕಿಟಕಿಗಳಿಂದ ಪ್ರವೇಶಿಸುತ್ತಾರೆ.

ಯೋವೇಲ 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी