೧ ಸಮುವೇಲನು 16:20

ಆಗ ಇಷಯನು ರೊಟ್ಟಿಯನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಒಂದು ಮೇಕೆಯ ಮರಿ ಯನ್ನೂ ಕತ್ತೆಯ ಮೇಲೆ ಹೇರಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 16

18ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.

19ಆದಕಾರಣ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ--ಕುರಿಗಳ ಬಳಿಯಲ್ಲಿರುವ ನಿನ್ನ ಕುಮಾರನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು ಅಂದನು.

20ಆಗ ಇಷಯನು ರೊಟ್ಟಿಯನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಒಂದು ಮೇಕೆಯ ಮರಿ ಯನ್ನೂ ಕತ್ತೆಯ ಮೇಲೆ ಹೇರಿ ತನ್ನ ಮಗನಾದ ದಾವೀದನ ಮೂಲಕ ಸೌಲನಿಗೆ ಕಳುಹಿಸಿದನು.

21ಹಾಗೆಯೇ ಅವನು ಸೌಲನ ಬಳಿಗೆ ಬಂದು ಅವನ ಮುಂದೆ ನಿಂತನು. ಅವನು ದಾವೀದನನ್ನು ಬಹಳವಾಗಿ ಪ್ರೀತಿಮಾಡಿದನು. ಸೌಲನಿಗೆ ಇವನು ಆಯುಧ ಹೊರುವವನಾದನು.

22ಸೌಲನು ಇಷಯನ ಬಳಿಗೆ ಮನುಷ್ಯನನ್ನು ಕಳುಹಿಸಿ--ದಾವೀದನು ನನ್ನ ಸಮ್ಮುಖ ದಲ್ಲಿ ನಿಲ್ಲುವ ಹಾಗೆ ಕೇಳಿಕೊಳ್ಳುತ್ತೇನೆ; ಯಾಕಂದರೆ ನನ್ನ ಸಮ್ಮುಖದಲ್ಲಿ ಅವನಿಗೆ ದಯೆದೊರಕಿತು ಅಂದನು.

೧ ಸಮುವೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी