ಯೆಹೋಶುವ 22:11

ಇಗೋ, ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧಗೋತ್ರದವರೂ ಕಾನಾನ್‌ ದೇಶಕ್ಕೆ ಎದುರಾಗಿ ಇಸ್ರಾಯೇಲ್‌ ಮಕ್ಕಳು ದಾಟಿ ಬಂದ ಯೊರ್ದನಿನ ಪ್ರಾಂತ್ಯದಲ್ಲಿ ಯಜ್ಞವೇದಿಯನ್ನು ಕಟ್ಟಿದರೆಂದು ಇಸ್ರಾಯೇಲ್‌ ಮಕ್ಕಳಿಗೂ ಕೇಳಿ ಬಂತು.

ಸಂದರ್ಭದೊಂದಿಗೆ ಓದಿ · ಯೆಹೋಶುವ 22

9ಕರ್ತನು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ತಾವು ವಶಮಾಡಿಕೊಂಡ ತಮ್ಮ ಸ್ವಾಸ್ತ್ಯದ ದೇಶವಾಗಿರುವ ಗಿಲ್ಯಾದ್‌ ದೇಶಕ್ಕೆ ಹೋಗುವದಕ್ಕೆ ಕಾನಾನ್‌ ದೇಶದಲ್ಲಿರುವ ಶೀಲೋ ವನ್ನೂ ಇಸ್ರಾಯೇಲ್‌ ಮಕ್ಕಳನ್ನೂ ಬಿಟ್ಟು ತಿರಿಗಿ ಹೋದರು.

10ಕಾನಾನ್‌ ದೇಶದಲ್ಲಿರುವ ಯೊರ್ದನಿನ ಪ್ರಾಂತ್ಯಕ್ಕೆ ಬಂದಾಗ ಅದರ ಬಳಿಯಲ್ಲಿ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರ ದವರೂ ನೋಟಕ್ಕೆ ದೊಡ್ಡದಾದ ಯಜ್ಞವೇದಿಯನ್ನು ಕಟ್ಟಿದರು.

11ಇಗೋ, ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧಗೋತ್ರದವರೂ ಕಾನಾನ್‌ ದೇಶಕ್ಕೆ ಎದುರಾಗಿ ಇಸ್ರಾಯೇಲ್‌ ಮಕ್ಕಳು ದಾಟಿ ಬಂದ ಯೊರ್ದನಿನ ಪ್ರಾಂತ್ಯದಲ್ಲಿ ಯಜ್ಞವೇದಿಯನ್ನು ಕಟ್ಟಿದರೆಂದು ಇಸ್ರಾಯೇಲ್‌ ಮಕ್ಕಳಿಗೂ ಕೇಳಿ ಬಂತು.

12ಇಸ್ರಾಯೇಲ್‌ ಮಕ್ಕಳು ಅದನ್ನು ಕೇಳಿದಾಗ ಸಭೆಯಲ್ಲಾ ಒಟ್ಟಾಗಿ ಅವರಿಗೆ ವಿರೋಧವಾಗಿ ಯುದ್ಧ ಮಾಡುವದಕ್ಕೆ ಶೀಲೋವಿನಲ್ಲಿ ಕೂಡಿದರು.

13ಗಿಲ್ಯಾದ್‌ ದೇಶದಲ್ಲಿರುವ ರೂಬೇನನ ಮಕ್ಕಳ ಬಳಿಗೂ ಗಾದನ ಮಕ್ಕಳ ಬಳಿಗೂ ಮನಸ್ಸೆಯ ಅರ್ಧ ಗೋತ್ರದವರ ಬಳಿಗೂ ಯಾಜಕನಾದ ಎಲಿಯಾ ಜರನ ಮಗನಾದ ಫಿನೇಹಾಸನನ್ನೂ

ಯೆಹೋಶುವ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी