ಆಗ ಇವನು ನಾಚಿಕೆಪಡುವ ವರೆಗೆ ದೇವರ ಮನುಷ್ಯನು ತನ್ನ ಮುಖವನ್ನು ಸ್ಥಿರಪಡಿಸಿ ಅತ್ತನು.
9ಹಾಗೆಯೇ ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮ ವಾದವುಗಳಲ್ಲಿ ನಾಲ್ವತ್ತು ಒಂಟೆಗಳು ಹೊರುವಷ್ಟನ್ನು ಕಾಣಿಕೆಯೊಂದಿಗೆ ಅವನನ್ನು ಎದುರುಗೊಳ್ಳಲು ಹೋಗಿ ಅವನ ಮುಂದೆ ಬಂದು ನಿಂತು--ಅರಾಮ್ಯರ ಅರಸನಾಗಿರುವ ನಿನ್ನ ಮಗನಾದ ಬೆನ್ಹದದನು--ಈ ವ್ಯಾಧಿಯಿಂದ ನಾನು ಬದುಕುವೆನೋ ಇಲ್ಲವೋ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಅಂದನು.
10ಅದಕ್ಕೆ ಎಲೀಷನು--ಅವನಿಗೆ ನಿಜ ವಾಗಿಯೂ ಸ್ವಸ್ಥನಾಗುವಿ ಎಂದು ಹೋಗಿ ಹೇಳು; ಆದರೆ ಅವನು ನಿಜವಾಗಿ ಸಾಯುವನೆಂದು ಕರ್ತನು ನನಗೆ ತೋರಿಸಿದ್ದಾನೆ ಅಂದನು.
11ಆಗ ಇವನು ನಾಚಿಕೆಪಡುವ ವರೆಗೆ ದೇವರ ಮನುಷ್ಯನು ತನ್ನ ಮುಖವನ್ನು ಸ್ಥಿರಪಡಿಸಿ ಅತ್ತನು.
12ಆಗ ಹಜಾಯೇ ಲನು--ನನ್ನ ಒಡೆಯನು ಅಳುವದೇನು ಅಂದನು.ಅದಕ್ಕವನು -- ಇಸ್ರಾಯೇಲ್ ಮಕ್ಕಳಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ; ನೀನು ಅವರ ಕೋಟೆಗಳಿಗೆ ಬೆಂಕಿ ಹೊತ್ತಿಸಿ ಅವರ ಯೌವನ ಸ್ಥರನ್ನು ಕತ್ತಿಯಿಂದ ಕೊಂದು ಅವರ ಕೂಸುಗಳನ್ನು ಅಪ್ಪಳಿಸಿ ಅವರ ಗರ್ಭಿಣೀ ಸ್ತ್ರೀಯರನ್ನು ಸೀಳಿಬಿಡುವಿ ಅಂದನು.
13ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ