ಯಾಕಂದರೆ--ಅದು ಆಗದ ಹಾಗೆ ಆ ಕೆಲಸ ಬಿಟ್ಟುಬಿಟ್ಟು ಅವರ ಕೈಗಳು ಬಲಹೀನವಾಗುವವು ಅಂದುಕೊಂಡು ಅವರೆಲ್ಲರೂ ನಮ್ಮನ್ನು ಭಯಪಡಿಸಿದರು.
7ಇದಲ್ಲದೆ, ಯೆಹೂದದಲ್ಲಿ ಅರಸನು ಇದ್ದಾನೆಂದು ಯೆರೂಸಲೇಮಿನಲ್ಲಿ ನಿನ್ನನ್ನು ಕುರಿತು ಕೂಗುವದಕ್ಕೆ ನೀನು ಪ್ರವಾದಿಗಳನ್ನು ನೇಮಿಸಿದಿ ಎಂಬದಾಗಿ ಜನಾಂಗಗಳಲ್ಲಿ ಸುದ್ದಿ ಉಂಟು; ಗೆಷೆಮನು ಹಾಗೆಯೇ ಹೇಳುತ್ತಾನೆ. ಈಗ ಈ ವರ್ತಮಾನ ಅರಸನಿಗೆ ತಿಳಿಸಲ್ಪಡುವದು. ಆದಕಾರಣ ನಾವು ಕೂಡಿ ಕೊಂಡು ಯೋಚನೆ ಮಾಡಿಕೊಳ್ಳುವ ಹಾಗೆ ಬಾ ಎಂದು ಬರೆದಿತ್ತು.
8ಆಗ ನಾನು--ನೀನು ಹೇಳಿದ ಕಾರ್ಯಗಳಲ್ಲಿ ಯಾವದೂ ಮಾಡಿದ್ದಿಲ್ಲ. ನೀನು ಅವುಗಳನ್ನು ನಿನ್ನ ಸ್ವಂತ ಹೃದಯದಲ್ಲಿ ಕಲ್ಪಿಸುತ್ತಾ ಇದ್ದೀ ಎಂದು ಹೇಳಿಕಳುಹಿಸಿದೆನು.
9ಯಾಕಂದರೆ--ಅದು ಆಗದ ಹಾಗೆ ಆ ಕೆಲಸ ಬಿಟ್ಟುಬಿಟ್ಟು ಅವರ ಕೈಗಳು ಬಲಹೀನವಾಗುವವು ಅಂದುಕೊಂಡು ಅವರೆಲ್ಲರೂ ನಮ್ಮನ್ನು ಭಯಪಡಿಸಿದರು.
10ಆದದರಿಂದ ಈಗ ಓ ದೇವರೇ, ನನ್ನ ಕೈಗಳನ್ನು ಬಲಪಡಿಸು ಅಂದೆನು. ತರುವಾಯ ನಾನು ಅಡಗಿ ಕೊಂಡಿದ್ದ ಮೆಹೇಟಬೇಲನ ಮಗನಾದ ದೆಲಾಯನ ಮಗನಾದ ಶೆಮಾಯನ ಮನೆಗೆ ಬಂದೆನು. ಅವನುನಿನ್ನನ್ನು ಕೊಂದುಹಾಕಲು ಬರುತ್ತಾರೆ. ಹೌದು, ರಾತ್ರಿಯಲ್ಲಿ ನಿನ್ನನ್ನು ಕೊಂದು ಹಾಕಲು ಬರುತ್ತಾರೆ ಆದದರಿಂದ ನಾವಿಬ್ಬರೂ ದೇವರ ಆಲಯದಲ್ಲಿ ಪ್ರವೇಶಿಸಿ ಮಂದಿರದ ಬಾಗಲುಗಳನ್ನು ಮುಚ್ಚೊಣ ಬಾ ಅಂದನು.
11ಅದಕ್ಕೆ ನಾನು--ನನ್ನಂಥಾ ಮನು ಷ್ಯನು ಓಡಿಹೋಗುವನೋ? ನನ್ನಂಥವನು ಬದುಕ ಬೇಕೆಂದು ಮಂದಿರದೊಳಕ್ಕೆ ಹೋಗುವವನಾರು? ನಾನು ಒಳಗೆ ಹೋಗುವದಿಲ್ಲ ಅಂದೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ