೧ ಅರಸುಗಳು 15:27

ಇಸ್ಸಾಕಾರನ ಮನೆಯವನಾಗಿರುವ ಅಹೀಯನ ಮಗನಾದ ಬಾಷನು ಅವನಿಗೆ ವಿರೋಧವಾಗಿದ್ದು ಫಿಲಿಷ್ಟಿಯರಿಗೆ ಉಂಟಾದ ಗಿಬ್ಬೆತೋನಿನಲ್ಲಿ ಅವನನ್ನು ಹೊಡೆದುಬಿಟ್ಟನು. ಯಾಕಂದರೆ ನಾದಾಬನೂ ಸಮಸ್ತ ಇಸ್ರಾಯೇಲ್ಯರೂ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 15

25ಯೆಹೂದದ ಅರಸನಾದ ಆಸನ ಎರಡನೇ ವರುಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಎರಡು ವರುಷ ಆಳಿದನು.

26ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಪಾಪಮಾಡಲು ಇಸ್ರಾಯೇಲ್ಯರನ್ನು ಪ್ರೇರೇಪಿಸಿದ ಅವನ ತಂದೆಯ ಪಾಪದಲ್ಲಿಯೂ ಅವನ ಮಾರ್ಗದಲ್ಲಿಯೂ ನಡೆದನು.

27ಇಸ್ಸಾಕಾರನ ಮನೆಯವನಾಗಿರುವ ಅಹೀಯನ ಮಗನಾದ ಬಾಷನು ಅವನಿಗೆ ವಿರೋಧವಾಗಿದ್ದು ಫಿಲಿಷ್ಟಿಯರಿಗೆ ಉಂಟಾದ ಗಿಬ್ಬೆತೋನಿನಲ್ಲಿ ಅವನನ್ನು ಹೊಡೆದುಬಿಟ್ಟನು. ಯಾಕಂದರೆ ನಾದಾಬನೂ ಸಮಸ್ತ ಇಸ್ರಾಯೇಲ್ಯರೂ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು.

28ಯೆಹೂದದ ಅರಸನಾದ ಆಸನ ಮೂರ ನೇ ವರುಷದಲ್ಲಿ ಬಾಷನು ನಾದಾಬನನ್ನು ಕೊಂದು ಹಾಕಿ ಅವನಿಗೆ ಬದಲಾಗಿ ಆಳಿದನು.

29ಅವನು ಆಳುತ್ತಿರುವಾಗ ಏನಾಯಿತಂದರೆ, ಯಾರೊಬ್ಬಾಮನ ಮನೆಯನ್ನೆಲ್ಲಾ ಹೊಡೆದುಬಿಟ್ಟನು.

೧ ಅರಸುಗಳು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी