ವಿಮೋಚನಕಾಂಡ 10:24

ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 10

22ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ ಐಗುಪ್ತದೇಶದಲ್ಲೆಲ್ಲಾ ಮೂರು ದಿನಗಳ ವರೆಗೆ ಘೋರವಾದ ಕತ್ತಲು ಕವಿಯಿತು.

23ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್‌ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.

24ಆಗ ಫರೋಹನು ಮೋಶೆಯನ್ನು ಕರೆ ಯಿಸಿ ಅವನಿಗೆ--ನೀವು ಹೋಗಿ ಕರ್ತನಿಗೆ ಸೇವೆ ಮಾಡಿರಿ, ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಕ್ಕಳೂ ನಿಮ್ಮ ಸಂಗಡ ಹೋಗಲಿ ಅಂದನು.

25ಅದಕ್ಕೆ ಮೋಶೆಯು ಅವನಿಗೆ--ನಮ್ಮ ದೇವರಾದ ಕರ್ತನಿಗೆ ಅರ್ಪಿಸುವದಕ್ಕೆ ನೀನು ನಮ್ಮ ಕೈಯಲ್ಲಿ ಬಲಿಗಳನ್ನೂ ದಹನಬಲಿಗಳನ್ನೂ ಕೊಡಬೇಕು.

26ನಮ್ಮ ಪಶುಗಳನ್ನೂ ನಾವು ನಮ್ಮ ಸಂಗಡ ತೆಗೆದು ಕೊಂಡು ಹೋಗುವೆವು. ಒಂದು ಗೊರಸೆಯಾದರೂ ಬಿಡುವದಿಲ್ಲ. ಯಾಕಂದರೆ ನಮ್ಮ ದೇವರಾದ ಕರ್ತನಿಗೆ ಆರಾಧನೆ ಮಾಡುವದಕ್ಕೆ ಅವುಗಳಿಂದಲೇ ಆರಿಸ ಬೇಕು. ಕರ್ತನಿಗೆ ಯಾವ ಸೇವೆಮಾಡಬೇಕೆಂಬದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯುವದಿಲ್ಲ ಅಂದನು.

ವಿಮೋಚನಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी