ಯೆರೆಮಿಯ 30:8

ಆ ದಿವಸದಲ್ಲಿ ಆಗುವದೇನಂದರೆ--ನಾನು ಅವನ ನೊಗವನ್ನು ನಿನ್ನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು; ನಿನ್ನ ಬಂಧನಗಳನ್ನು ಹರಿದುಬಿಡುವೆನು; ಅನ್ಯರು ಇನ್ನು ಅವನಿಂದ ಸೇವೆ ಮಾಡಿಸಿಕೊಳ್ಳುವದಿಲ್ಲವೆಂದು ಸೈನ್ಯ ಗಳ ಕರ್ತನು ಅನ್ನುತ್ತಾನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 30

6ಈಗ ವಿಚಾರಿಸಿ ನೋಡಿರಿ; ಗಂಡಸು ಪ್ರಸವವೇದನೆ ಪಡುವದುಂಟೇ? ನಾನು ಯಾಕೆ ಪುರುಷರೆಲ್ಲರನು ಪ್ರಸವವೇದನೆ ಪಡುವ ಸ್ತ್ರೀಯ ಹಾಗೆ ನಡುವಿನ ಮೇಲೆ ಕೈ ಇಟ್ಟವರ ಹಾಗೆ ನೋಡುತ್ತೇನೆ; ಯಾಕೆ ಮುಖಗಳೆಲ್ಲಾ ಕಳೆಗುಂದಿದವು?

7ಅಯ್ಯೋ, ಆ ದಿನವು ಭಯಂಕರವಾದದ್ದು; ಅದರಂಥದ್ದು ಯಾವದೂ ಇಲ್ಲ; ಅದು ಯಾಕೋಬನಿಗೆ ಇಕ್ಕಟ್ಟಿನ ಕಾಲವೇ; ಆದಾಗ್ಯೂ ಅವನು ಅದರಿಂದ ರಕ್ಷಿಸಲ್ಪಡುವನು.

8ಆ ದಿವಸದಲ್ಲಿ ಆಗುವದೇನಂದರೆ--ನಾನು ಅವನ ನೊಗವನ್ನು ನಿನ್ನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕುವೆನು; ನಿನ್ನ ಬಂಧನಗಳನ್ನು ಹರಿದುಬಿಡುವೆನು; ಅನ್ಯರು ಇನ್ನು ಅವನಿಂದ ಸೇವೆ ಮಾಡಿಸಿಕೊಳ್ಳುವದಿಲ್ಲವೆಂದು ಸೈನ್ಯ ಗಳ ಕರ್ತನು ಅನ್ನುತ್ತಾನೆ.

9ಆದರೆ ಅವರು ತಮ್ಮ ದೇವರಾದ ಕರ್ತನಿಗೂ ಅವರಿಗೋಸ್ಕರ ನಾನು ಎಬ್ಬಿ ಸುವ ಅವರ ಅರಸನಾದ ದಾವೀದನಿಗೂ ಸೇವೆ ಮಾಡು ವರು.

10ಆದದರಿಂದ ನನ್ನ ಸೇವಕನಾದ ಯಾಕೋ ಬನೇ, ಭಯಪಡಬೇಡ ಎಂದು ಕರ್ತನು ಅನ್ನುತ್ತಾನೆ; ಇಸ್ರಾಯೇಲೇ ಹೆದರಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಲ್ಲಿರುವನು; ಹೆದರಿಸುವವನಿಲ್ಲದೆ ಸೌಖ್ಯವಾಗಿರುವನು.

ಯೆರೆಮಿಯ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी