೨ ಅರಸುಗಳು 11:16

ಆಗ ಅವರು ಅವಳನ್ನು ಹಿಡಿದು ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಲೆಮಾಡಿದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 11

14ಅವಳು ದೃಷ್ಟಿಸಿ ನೋಡುವಾಗ ಇಗೋ, ಅರಸನು ಪದ್ಧತಿಯ ಪ್ರಕಾರ ಸ್ತಂಭದ ಬಳಿ ಯಲ್ಲಿ ನಿಂತಿದ್ದನು. ಪ್ರಧಾನರೂ ತುತೂರಿ ಊದು ವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದಿದರು. ಆಗ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದು ಕೊಂಡು--ದ್ರೋಹ, ದ್ರೋಹ ಎಂದು ಕೂಗಿದಳು.

15ಆದರೆ ಯಾಜಕನಾದ ಯೆಹೋಯಾದಾವನು ನೂರರ ಅಧಿಪತಿಗಳಿಗೂ ಸೈನ್ಯದ ಅಧಿಕಾರಿಗಳಿಗೂಸಾಲುಗಳ ಹೊರಗೆ ಅವಳನ್ನು ಹೊರಡಿಸಿರಿ ಎಂದೂ ಅವಳನ್ನು ಹಿಂಬಾಲಿಸುವವನು ಕತ್ತಿಯಿಂದ ಕೊಲ್ಲ ಲ್ಪಡಲಿ ಎಂದೂ ಹೇಳಿ ಆಜ್ಞಾಪಿಸಿದನು. ಯಾಕಂದರೆ ಅವಳು ಕರ್ತನ ಮಂದಿರದಲ್ಲಿ ಕೊಲೆಯಾಗಬಾರ ದೆಂದು ಯಾಜಕನು ಹೇಳಿದನು.

16ಆಗ ಅವರು ಅವಳನ್ನು ಹಿಡಿದು ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಲೆಮಾಡಿದರು.

17ಯೆಹೋಯಾದಾವನು ಕರ್ತನಿಗೂ ಅರಸನಿಗೂ ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು. ಆ ಸಮಯದಲ್ಲಿ ಕರ್ತನ ಜನರಾಗಿರುವ ಹಾಗೆ ಅರಸ ನಿಗೂ ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು.

18ದೇಶದ ಜನರೆಲ್ಲರೂ ಬಾಳನ ಮನೆಯಲ್ಲಿ ಹೊಕ್ಕು ಅದನ್ನು ಕೆಡವಿಹಾಕಿ ಅವನ ಬಲಿಪೀಠಗಳನ್ನೂ ವಿಗ್ರಹ ಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದು ಬಿಟ್ಟು ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು. ಇದಲ್ಲದೆ ಯಾಜಕನು ಕರ್ತನ ಮನೆಯಲ್ಲಿ ಅಧಿಕಾರಿಗಳನ್ನು ನೇಮಿಸಿ ದನು.

೨ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी