ತರುವಾಯ ಕರ್ತನು ಮೋಶೆಯ ಸಂಗಡ ಮಾತ ನಾಡಿ--
23ಬೆಂಕಿ ತಾಳುವ ವಸ್ತುಗಳನ್ನೆಲ್ಲಾ ನೀವು ಬೆಂಕಿಯಿಂದ ದಾಟಿಸಬೇಕು; ಆಗ ಅವು ಶುದ್ಧವಾಗುವವು. ಪ್ರತ್ಯೇಕ ವಾದ ನೀರಿನಿಂದ ಮಾತ್ರ ಅವುಗಳು ಪವಿತ್ರವಾಗ ಬೇಕು; ಆದರೆ ಬೆಂಕಿ ತಾಳದ ಸಮಸ್ತವನ್ನು ನೀವು ನೀರಿನಿಂದ ದಾಟಿಸಬೇಕು.
24ಏಳನೇ ದಿವಸದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಒಗೆದುಕೊಂಡು ಶುದ್ಧರಾಗ ಬೇಕು; ತರುವಾಯ ಪಾಳೆಯದೊಳಗೆ ಬರಬೇಕು ಎಂದು ಹೇಳಿದನು.
25ತರುವಾಯ ಕರ್ತನು ಮೋಶೆಯ ಸಂಗಡ ಮಾತ ನಾಡಿ--
26ನೀನೂ ಯಾಜಕನಾದ ಎಲ್ಲಾಜಾರನೂ ಸಭೆಯ ಮುಖ್ಯ ಯಜಮಾನರೂ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಒಯ್ಯಲ್ಪಟ್ಟ ಸುಲಿಗೆಯ ಲೆಕ್ಕವನ್ನು ತಕ್ಕೊಳ್ಳಿರಿ.
27ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಸ್ಥರಿಗೂ ಸಮಸ್ತ ಸಭೆಗೂ ಎರಡು ಪಾಲು ಮಾಡಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ