ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
11ಇದಾದ ಮೇಲೆ ಮಾರಣೆಯ ದಿನ ಆತನು ನಾಯಿನೆಂಬ ಪಟ್ಟಣಕ್ಕೆ ಹೋದನು. ಆಗ ಆತನ ಶಿಷ್ಯರಲ್ಲಿ ಅನೇಕರೂ ಬಹು ಜನರೂ ಆತನ ಸಂಗಡ ಹೋದರು.
12ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.
13ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು.
14ಆತನು ಬಂದು ಪೆಟ್ಟಿಗೆಯನ್ನು ಮುಟ್ಟಿದಾಗ ಅದನ್ನು ಹೊತ್ತುಕೊಂಡಿದ್ದವರು ಕದಲದೆ ನಿಂತರು; ಆಗ ಆತನು--ಯೌವನಸ್ಥನೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
15ಆಗ ಸತ್ತವನು ಕೂತುಕೊಂಡು ಮಾತನಾಡಲಾರಂಭಿಸಿದನು. ಆತನು ಅವನನ್ನು ಅವನ ತಾಯಿಗೆ ಒಪ್ಪಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ