ನ್ಯಾಯಸ್ಥಾಪಕರು 15:17

ಅವನು ಮಾತನಾಡಿ ತೀರಿಸಿದಾಗ ತನ್ನ ಕೈಯಲ್ಲಿದ್ದ ದವಡೇ ಎಲುಬನ್ನು ಬಿಸಾಟುಬಿಟ್ಟು ಆ ಸ್ಥಳಕ್ಕೆ ರಾಮತ್‌ ಲೆಹೀ ಎಂಬ ಹೆಸರಿಟ್ಟನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 15

15ಅವನು ಒಂದು ಕತ್ತೆ ದವಡೆಯ ಹೊಸ ಎಲು ಬನ್ನು ಕಂಡುಕೊಂಡು ತನ್ನ ಕೈಯನ್ನು ಚಾಚಿ ಅದನ್ನು ತಕ್ಕೊಂಡು ಅದರಿಂದ ಸಾವಿರ ಜನರನ್ನು ವಧಿಸಿಬಿಟ್ಟನು.

16ಸಂಸೋನನು--ನಾನು ಕತ್ತೆಯ ದವಡೇ ಎಲುಬಿ ನಿಂದ ಕುಪ್ಪೆ ಕುಪ್ಪೆಯಾಗಿ, ಕತ್ತೆಯ ದವಡೇ ಎಲುಬಿ ನಿಂದ ಸಾವಿರ ಜನರನ್ನು ವಧಿಸಿಬಿಟ್ಟಿದ್ದೇನೆ ಅಂದನು.

17ಅವನು ಮಾತನಾಡಿ ತೀರಿಸಿದಾಗ ತನ್ನ ಕೈಯಲ್ಲಿದ್ದ ದವಡೇ ಎಲುಬನ್ನು ಬಿಸಾಟುಬಿಟ್ಟು ಆ ಸ್ಥಳಕ್ಕೆ ರಾಮತ್‌ ಲೆಹೀ ಎಂಬ ಹೆಸರಿಟ್ಟನು.

18ಆದರೆ ಅವನು ಬಹಳ ದಾಹಗೊಂಡು ಕರ್ತನನ್ನು ಕೂಗಿ--ನೀನು ನಿನ್ನ ಸೇವಕನ ಕೈಯಿಂದ ಈ ದೊಡ್ಡ ರಕ್ಷಣೆಯನ್ನು ಕೊಟ್ಟಿದ್ದೀ; ಈಗ ನಾನು ದಾಹದಿಂದ ಸತ್ತು ಸುನ್ನತಿ ಇಲ್ಲದವರ ಕೈಯಲ್ಲಿ ಬೀಳಬೇಕೋ ಅಂದನು.

19ಆಗ ದೇವರು ದವಡೆ ಟೊಳ್ಳಾದ ಒಂದು ಸ್ಥಳವನ್ನು ಸೀಳಿಬಿಟ್ಟಾಗ ಅದರೊಳಗಿಂದ ನೀರು ಹೊರಟುಬಂತು. ಸಂಸೋನನು ಆ ನೀರನ್ನು ಕುಡಿದ ದ್ದರಿಂದ ಅವನ ಆತ್ಮ ತಿರಿಗಿ ಬಂತು; ಅವನು ಜೀವಿಸಿ ದನು. ಆದದರಿಂದ ಏನ್‌ಹಕ್ಕೋರೇ ಎಂದು ಅದಕ್ಕೆ ಹೆಸರಿಟ್ಟನು. ಈ ದಿನದ ವರೆಗೂ ಲೆಹೀಯಲ್ಲಿ ಅದು ಇದೆ.

ನ್ಯಾಯಸ್ಥಾಪಕರು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी