೧ ಅರಸುಗಳು 2:3

ನೀನು ಏನು ಮಾಡಿದರೂ ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿ ಬುದ್ಧಿಯುಳ್ಳವನಾಗಿರು ವದಕ್ಕೂ ಕರ್ತನು ನನ್ನನ್ನು ಕುರಿತು--ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ನನ್ನ ಮುಂದೆ ಸತ್ಯವಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಇಸ್ರಾ ಯೇಲಿನ ಸಿಂಹಾಸನದ ಮೇಲೆ ಕೂಡ್ರತಕ್ಕವರಲ್ಲಿ ನಿನಗೆ ಕೊರತೆ ಇರುವದಿಲ್ಲ ಎಂದು ಹೇಳಿದ ತನ್ನ ವಾಕ್ಯವನ್ನು ಸ್ಥಿರಪಡಿಸುವದಕ್ಕೂ

ಸಂದರ್ಭದೊಂದಿಗೆ ಓದಿ · ೧ ಅರಸುಗಳು 2

1ದಾವೀದನ ಸಾಯುವ ಕಾಲವು ಸವಿಾಪಿಸಿದ್ದರಿಂದ ಅವನು ತನ್ನ ಮಗನಾದ ಸೊಲೊಮೋನನಿಗೆ ಆಜ್ಞಾಪಿಸಿದ್ದೇನಂದರೆ

2ಭೂಮಿಯಲ್ಲಿರುವವರೆಲ್ಲರೂ ಹೋಗುವ ಮಾರ್ಗ ವಾಗಿ ನಾನೂ ಹೋಗುತ್ತೇನೆ; ನೀನು ಬಲಗೊಂಡು ಶೂರನಾಗಿರು.

3ನೀನು ಏನು ಮಾಡಿದರೂ ಎಲ್ಲಿ ಸಂಚರಿಸಿದರೂ ಎಲ್ಲಾದರಲ್ಲಿ ಬುದ್ಧಿಯುಳ್ಳವನಾಗಿರು ವದಕ್ಕೂ ಕರ್ತನು ನನ್ನನ್ನು ಕುರಿತು--ನಿನ್ನ ಮಕ್ಕಳು ತಾವು ಪೂರ್ಣಹೃದಯದಿಂದಲೂ ಪೂರ್ಣಪ್ರಾಣ ದಿಂದಲೂ ನನ್ನ ಮುಂದೆ ಸತ್ಯವಾಗಿ ನಡೆದುಕೊಳ್ಳುವ ಹಾಗೆ ತಮ್ಮ ಮಾರ್ಗವನ್ನು ಕಾದುಕೊಂಡರೆ ಇಸ್ರಾ ಯೇಲಿನ ಸಿಂಹಾಸನದ ಮೇಲೆ ಕೂಡ್ರತಕ್ಕವರಲ್ಲಿ ನಿನಗೆ ಕೊರತೆ ಇರುವದಿಲ್ಲ ಎಂದು ಹೇಳಿದ ತನ್ನ ವಾಕ್ಯವನ್ನು ಸ್ಥಿರಪಡಿಸುವದಕ್ಕೂ

4ನೀನು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿರುವ ಪ್ರಕಾರ ನಿನ್ನ ದೇವರಾದ ಕರ್ತನ ನಿಯಮಗಳನ್ನೂ ಆಜ್ಞೆಗಳನ್ನೂ ನ್ಯಾಯಗಳನ್ನೂ ಸಾಕ್ಷಿಗಳನ್ನೂ ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವ ಹಾಗೆ ಆತನ ಆಜ್ಞೆಯನ್ನು ಕೈಗೊಳ್ಳು.

5ಇದಲ್ಲದೆ ಚೆರೂಯಳ ಮಗನಾದ ಯೋವಾಬನು ನನಗೂ ಇಸ್ರಾಯೇಲಿನ ಸೈನ್ಯಗಳಿಗೆ ಇಬ್ಬರು ಅಧಿಪತಿಗಳಾದ ನೇರನ ಮಗನಾದ ಅಬ್ನೇರ ನಿಗೂ ಯೇತ್ರನ ಮಗನಾದ ಅಮಾಸನಿಗೂ ಏನು ಮಾಡಿದನೋ ನೀನು ಬಲ್ಲೆ. ಯಾಕಂದರೆ ಅವನು ಅವರನ್ನು ಕೊಂದು ಸಮಾಧಾನದಲ್ಲಿ ಯುದ್ಧದ ರಕ್ತ ವನ್ನು ಚೆಲ್ಲಿ ತನ್ನ ನಡುವಿನಲ್ಲಿರುವ ನಡುಕಟ್ಟಿನ ಮೇಲೆಯೂ ತನ್ನ ಪಾದಗಳಲ್ಲಿರುವ ಪಾದರಕ್ಷೆಗಳ ಮೇಲೆಯೂ ಯುದ್ಧದ ರಕ್ತವನ್ನು ಹಚ್ಚಿಕೊಂಡನು.

೧ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी