ಯೆಹೋಶುವ 13:3

ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ;

ಸಂದರ್ಭದೊಂದಿಗೆ ಓದಿ · ಯೆಹೋಶುವ 13

1ಯೆಹೋಶುವನು ದಿನ ತುಂಬಿದ ಮುದುಕ ನಾಗಲು ಕರ್ತನು ಅವನಿಗೆ--ನೀನು ಮುದುಕನಾಗಿ ದಿನಗಳು ಹೋದವನಾದಿ; ಆದರೆ ಸ್ವಾಧೀನಮಾಡಿಕೊಳ್ಳತಕ್ಕ ಸೀಮೆಯು ಇನ್ನು ಬಹಳ ವಾಗಿ ಇರುತ್ತದೆ.

2ಅದು ಯಾವದೆಂದರೆ--ಐಗು ಪ್ತಕ್ಕೆ ಎದುರಾದ ಶೀಹೋರಿನಿಂದ ಕಾನಾನ್ಯರಿಗೆ ಎಣಿಸಲ್ಪಟ್ಟದ್ದಾದ ಉತ್ತರಕ್ಕೆ ಎಕ್ರೋನಿನ ಮೇರೆಯ ವರೆಗೂ ಇರುವ ಫಿಲಿಷ್ಟಿಯರ ಮೇರೆಗಳೆಲ್ಲಾ ಗೆಷೂ ರ್ಯರ ದೇಶವೆಲ್ಲಾ,

3ಗಾಜದವರೂ ಅಷ್ಡೋದ್ಯರೂ ಅಷ್ಕೆಲೋನ್ಯರೂ ಗಿತ್ತಿಯರೂ ಎಕ್ರೋನಿಯರೂ ಎಂಬುವ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಪ್ರಾಂತ್ಯ ಅವ್ವೀಯರ ಸೀಮೆ;

4ದಕ್ಷಿಣ ಪ್ರಾಂತ್ಯದಿಂದ ಅಮೋರಿಯರ ಮೇರೆಯಾದ ಅಫೇಕದ ವರೆಗೂ ಇರುವ ಕಾನಾನ್ಯರ ಸರ್ವ ದೇಶವು ಚೀದೋನ್ಯರಿಗೆ ಹೊಂದಿದ ಮೆಯಾರವು;

5ಗೆಬಾಲ್ಯರ ಪ್ರಾಂತ್ಯ; ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಹೆರ್ಮೋನ್‌ ಬೆಟ್ಟದ ಕೆಳಗೆ ಇರುವ ಬಾಳ್ಗಾದಿನಿಂದ ಹಾಮಾತಿನಲ್ಲಿ ಪ್ರವೇಶಿಸುವ ಸ್ಥಳದ ವರೆಗೂ ಇರುವ ಲೆಬನೋನೆಲ್ಲಾ ಇವುಗಳೇ.

ಯೆಹೋಶುವ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी