ನಿನ್ನ ಸನ್ನಿಧಿಯೊಳಗಿಂದ ನನಗೆ ನ್ಯಾಯತೀರ್ಪು ಹೊರಬರಲಿ; ನಿನ್ನ ಕಣ್ಣುಗಳು ನ್ಯಾಯವಾದವುಗಳನ್ನು ದೃಷ್ಟಿಸಲಿ.
1ಓ ಕರ್ತನೇ, ನ್ಯಾಯವನ್ನು ಕೇಳು; ನನ್ನ ಮೊರೆಯನ್ನು ಆಲೈಸು; ನನ್ನ ಪ್ರಾರ್ಥನೆಗೆ ಕಿವಿಗೊಡು; ಅದು ಮೋಸದ ತುಟಿಗಳಿಂದ ಬಂದ ದ್ದಲ್ಲ.
2ನಿನ್ನ ಸನ್ನಿಧಿಯೊಳಗಿಂದ ನನಗೆ ನ್ಯಾಯತೀರ್ಪು ಹೊರಬರಲಿ; ನಿನ್ನ ಕಣ್ಣುಗಳು ನ್ಯಾಯವಾದವುಗಳನ್ನು ದೃಷ್ಟಿಸಲಿ.
3ನೀನು ನನ್ನ ಹೃದಯವನ್ನು ಶೋಧಿಸಿದ್ದೀ, ರಾತ್ರಿಯಲ್ಲಿ ನನ್ನನ್ನು ದರ್ಶಿಸಿದ್ದೀ; ನನ್ನನ್ನು ಪುಟಕ್ಕೆ ಹಾಕಿ ಏನೂ ಕಂಡುಕೊಳ್ಳಲಿಲ್ಲ. ನನ್ನ ಬಾಯಿ ಅತಿ ಕ್ರಮಿಸದಂತೆ ನಾನು ನಿಶ್ಚಯ ಮಾಡಿದ್ದೇನೆ.
4ಮನು ಷ್ಯರ ಕ್ರಿಯೆಗಳ ವಿಷಯವಾಗಿ ನಿನ್ನ ತುಟಿಗಳ ಮಾತಿ ನಿಂದ ನಾಶಮಾಡುವವನ ಹಾದಿಗಳಿಗೆ ನನ್ನನ್ನು ತಪ್ಪಿಸಿ ಕಾಪಾಡಿಕೊಂಡೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ