ಆದಿಕಾಂಡ 11:5

ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 11

3ಅವರು--ಬನ್ನಿರಿ, ಇಟ್ಟಿಗೆ ಗಳನ್ನು ಮಾಡಿ ಚೆನ್ನಾಗಿ ಸುಡೋಣ ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರಿಗೆ ಕಲ್ಲಿಗೆ ಬದಲಾಗಿ ಇಟ್ಟಿಗೆಯೂ ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣೂ ಇದ್ದವು.

4ಅವರು--ಬನ್ನಿರಿ, ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು;

5ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು.

6ಕರ್ತನು--ಇಗೋ, ಜನವು ಒಂದೇ; ಅವರೆಲ್ಲರಿಗೆ ಭಾಷೆಯೂ ಒಂದೇ. ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು.

7ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು.

ಆದಿಕಾಂಡ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी