ನೀವು ಅವುಗಳಿಗೆ ಭಯಪಡಬೇಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ತಾನೇ ನಿಮಗೋಸ್ಕರ ಯುದ್ಧಮಾಡುತ್ತಾನೆ ಎಂಬದು.
20ಕರ್ತನು ನಿಮಗಾದ ಹಾಗೆ ನಿಮ್ಮ ಸಹೋದರರಿಗೂ ವಿಶ್ರಾಂತಿ ಕೊಡುವ ವರೆಗೂ ನಿಮ್ಮ ದೇವರಾದ ಕರ್ತನು ಯೊರ್ದನಿನ ಆಚೆಯಲ್ಲಿ ಅವರಿಗೆ ಕೊಟ್ಟ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುವ ವರೆಗೆ ನಾನು ನಿಮಗೆ ಕೊಟ್ಟ ಪಟ್ಟಣಗಳಲ್ಲಿ ವಾಸವಾಗಿರಬೇಕು; ಆ ಮೇಲೆ ನಾನು ನಿಮಗೆ ಕೊಟ್ಟ ನಿಮ್ಮ ನಿಮ್ಮ ಸ್ವಾಸ್ತ್ಯಗಳ ಬಳಿಗೆ ತಿರುಗಬಹುದು ಎಂಬದು.
21ಆ ಕಾಲದಲ್ಲಿ ನಾನು ಯೆಹೋಶುವನಿಗೆ ಆಜ್ಞಾ ಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ಆ ಇಬ್ಬರು ಅರಸರಿಗೆ ಮಾಡಿದ್ದನ್ನೆಲ್ಲಾ ನಿನ್ನ ಕಣ್ಣು ಗಳು ನೋಡಿದವು. ನೀನು ಹಾದುಹೋಗುವ ಎಲ್ಲಾ ರಾಜ್ಯಗಳಿಗೆ ಕರ್ತನು ಹಾಗೆಯೇ ಮಾಡುವನು.
22ನೀವು ಅವುಗಳಿಗೆ ಭಯಪಡಬೇಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ತಾನೇ ನಿಮಗೋಸ್ಕರ ಯುದ್ಧಮಾಡುತ್ತಾನೆ ಎಂಬದು.
23ಆ ಕಾಲದಲ್ಲಿ ನಾನು ಕರ್ತನಿಗೆ ಮಾಡಿದ ಬಿನ್ನಹ ವೇನಂದರೆ--
24ನನ್ನ ದೇವರಾದ ಕರ್ತನೇ, ನೀನು ನಿನ್ನ ಸೇವಕನಿಗೆ ನಿನ್ನ ಮಹಿಮೆಯನ್ನೂ ನಿನ್ನ ಕೈಯ ಶಕ್ತಿಯನ್ನೂ ತೋರಿಸುವದಕ್ಕೆ ಆರಂಭಮಾಡಿದಿ; ನಿನ್ನ ಕೃತ್ಯಗಳ ಹಾಗೆಯೂ ನಿನ್ನ ಪರಾಕ್ರಮದ ಹಾಗೆಯೂ ಮಾಡಲು ಶಕ್ತನಾದ ದೇವರು ಪರಲೋಕದಲ್ಲಾಗಲಿ ಭೂಮಿಯಲ್ಲಾಗಲಿ ಯಾರಿದ್ದಾರೆ? ನಾನು ದಾಟಿ ಹೋಗಿ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ