ಅವನಿಗೆ ಕರುಣೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ಇಲ್ಲವೆ ದಿಕ್ಕಿಲ್ಲದ ಅವನ ಮಕ್ಕಳನ್ನು ಕರುಣಿಸುವವನು ಯಾವನೂ ಇಲ್ಲದೆ ಇರಲಿ.
10ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಿ ತಮ್ಮ ಹಾಳು ಸ್ಥಳಗಳೊಳಗಿಂದ ರೊಟ್ಟಿಯನ್ನು ಹುಡುಕಲಿ.
11ಸಾಲಗಾರನು ಅವನಿಗೆ ಇರುವದನ್ನೆಲ್ಲಾ ದೋಚಿ ಕೊಳ್ಳಲಿ; ಅನ್ಯರು ಅವನ ಕಷ್ಟಾರ್ಜಿತವನ್ನು ಸುಲು ಕೊಳ್ಳಲಿ.
12ಅವನಿಗೆ ಕರುಣೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ಇಲ್ಲವೆ ದಿಕ್ಕಿಲ್ಲದ ಅವನ ಮಕ್ಕಳನ್ನು ಕರುಣಿಸುವವನು ಯಾವನೂ ಇಲ್ಲದೆ ಇರಲಿ.
13ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
14ಅವನ ತಂದೆಗಳ ಅಕ್ರಮವು ಕರ್ತನ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ