೨ ಸಮುವೇಲನು 2:23

ಆದರೆ ಅವನು ಹೋಗುವದಕ್ಕೆ ಒಪ್ಪದೆಹೋದದರಿಂದ ಅಬ್ನೇರನು ತನ್ನ ಬರ್ಜಿಯ ಹಿಂಭಾಗದ ಮೊನೆಯಿಂದ ಅವನ ಪಕ್ಕೆಯ ಐದನೇ ಎಲುಬಿನ ಕೆಳಗೆ ಹಾಯುವಂತೆ ತಿವಿದನು; ಅದು ಅವನ ಹಿಂದಿನಿಂದ ಹೊರಗೆ ಬಂತು. ಅವನು ಅಲ್ಲಿ ಬಿದ್ದು ಅದೇ ಸ್ಥಳದಲ್ಲಿ ಸತ್ತನು. ಆಗ ಏನಾಯಿಯತಂದರೆ ಅಸಾಹೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 2

21ಅದಕ್ಕವನುನಾನೇ ಅಂದನು. ಆಗ ಅಬ್ನೇರನು ಅವನಿಗೆ--ನೀನು ಬಲಗಡೆಗಾದರೂ ಎಡಗಡೆಗಾದರೂ ತಿರುಗಿ ಯೌವ ನಸ್ಥರಲ್ಲಿ ಒಬ್ಬನನ್ನು ಹಿಡಿದು ಅವನ ಆಯುಧಗಳನ್ನು ತಕ್ಕೋ ಅಂದನು. ಆದರೆ ಅಸಾಹೇಲನು ಅವನ ಹಿಂದಿನಿಂದ ತಿರುಗಲೊಲ್ಲದೆ ಇದ್ದನು.

22ಅಬ್ನೇರನು ಅಸಾಹೇಲನಿಗೆ--ನೀನು ನನ್ನನ್ನು ಹಿಂಬಾಲಿಸುವದನ್ನು ಬಿಟ್ಟು ತಿರುಗಿ ಹೋಗು; ನಾನು ನಿನ್ನನ್ನು ನೆಲಕ್ಕೆ ಹೊಡೆದು ಬಿಡುವದು ಯಾಕೆ? ನಾನು ನಿನ್ನ ಸಹೋ ದರನಾದ ಯೋವಾಬನಿಗೆ ಮುಖತೋರಿಸುವದು ಹೇಗೆ ಅಂದನು.

23ಆದರೆ ಅವನು ಹೋಗುವದಕ್ಕೆ ಒಪ್ಪದೆಹೋದದರಿಂದ ಅಬ್ನೇರನು ತನ್ನ ಬರ್ಜಿಯ ಹಿಂಭಾಗದ ಮೊನೆಯಿಂದ ಅವನ ಪಕ್ಕೆಯ ಐದನೇ ಎಲುಬಿನ ಕೆಳಗೆ ಹಾಯುವಂತೆ ತಿವಿದನು; ಅದು ಅವನ ಹಿಂದಿನಿಂದ ಹೊರಗೆ ಬಂತು. ಅವನು ಅಲ್ಲಿ ಬಿದ್ದು ಅದೇ ಸ್ಥಳದಲ್ಲಿ ಸತ್ತನು. ಆಗ ಏನಾಯಿಯತಂದರೆ ಅಸಾಹೇಲನು ಬಿದ್ದು ಸತ್ತ ಸ್ಥಳಕ್ಕೆ ಬಂದವರೆಲ್ಲರು ಅಲ್ಲಿಯೇ ಸುಮ್ಮನೆ ನಿಂತರು.

24ಆದರೆ ಯೋವಾ ಬನೂ ಅಬಿಷೈಯೂ ಅಬ್ನೇರನನ್ನು ಹಿಂದಟ್ಟಿ ಸೂರ್ಯಅಸ್ತಮಿಸುವ ವರೆಗೆ ಗಿಬ್ಯೋನಿನ ಅರಣ್ಯ ಮಾರ್ಗದ ಅಂಚಾದ ಗೀಯಕ್ಕೆ ಎದುರಾಗಿರುವ ಅಮ್ಮಾ ಎಂಬ ಗುಡ್ಡದ ಮಟ್ಟಿಗೂ ಬಂದರು.

25ಆಗ ಅಬ್ನೇರನ ಹಿಂದೆ ಬೆನ್ಯಾವಿಾನನ ಮಕ್ಕಳು ಒಟ್ಟಾಗಿ ಬಂದು ಸೈನ್ಯವಾಗಿ ಕೂಡಿಕೊಂಡು ಒಂದು ಗುಡ್ಡದ ಶಿಖರದಲ್ಲಿ ನಿಂತಿದ್ದರು.

೨ ಸಮುವೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी