ಅದಕ್ಕೆ ಬದಲಾಗಿ ಸುನ್ನತಿಯವರ ಸುವಾರ್ತೆಯು ಪೇತ್ರನಿಗೆ ಹೇಗೋ ಹಾಗೆಯೇ ಸುನ್ನತಿಯಿಲ್ಲದವರ ಸುವಾ ರ್ತೆಯು ನನಗೆ ಒಪ್ಪಿಸಲ್ಪಟ್ಟಿತು.
5ಸುವಾರ್ತೆಯ ಸತ್ಯಾರ್ಥವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂದು ನಾವು ಅವರಿಗೆ ವಶವಾಗುವದಕ್ಕೆ ಒಂದು ಗಳಿಗೆಯಾದರೂ ಸಮ್ಮತಿಪಡಲಿಲ್ಲ.
6ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯ ಲಿಲ್ಲ; (ಅವರು ಎಂಥವ ರಾಗಿದ್ದರೂ ನನಗೆ ಲಕ್ಷ್ಯವಿಲ್ಲ; ದೇವರು ಪಕ್ಷಪಾತಿಯಲ್ಲ). ಯಾಕಂದರೆ ಮಾನಿಷ್ಠರೆನಿಸಿ ಕೊಂಡವರು ನನಗೆ ಹೆಚ್ಚೇನೂ ಕೂಡಿಸಲಿಲ್ಲ.
7ಅದಕ್ಕೆ ಬದಲಾಗಿ ಸುನ್ನತಿಯವರ ಸುವಾರ್ತೆಯು ಪೇತ್ರನಿಗೆ ಹೇಗೋ ಹಾಗೆಯೇ ಸುನ್ನತಿಯಿಲ್ಲದವರ ಸುವಾ ರ್ತೆಯು ನನಗೆ ಒಪ್ಪಿಸಲ್ಪಟ್ಟಿತು.
8ಸುನ್ನತಿಯಾದವರಿಗೆ ಪೇತ್ರನ ಅಪೊಸ್ತಲತನವು ಪರಿಣಾಮವನ್ನುಂಟು ಮಾಡುವ ಹಾಗೆ ಮಾಡಿದಾತನೇ ಅನ್ಯ ಜನರಿಗೆ ನನ್ನ ಅಪೊಸ್ತಲತನವು ಶಕ್ತಿಯುಳ್ಳದ್ದಾಗಿರುವಂತೆ ಮಾಡಿ ದ್ದನ್ನು ಅವರು ಕಂಡರು.
9ಸ್ತಂಭಗಳೆಂದು ಕಾಣಿಸಿ ಕೊಂಡಿರುವ ಯಾಕೋಬ ಕೇಫ ಯೋಹಾನರು ನನಗೆ ದಯಪಾಲಿಸಿರುವ ಕೃಪೆಯನ್ನು ತಿಳಿದುಕೊಂಡು ಅನ್ಯೋ ನ್ಯತೆಯನ್ನು ತೋರಿಸುವದಕ್ಕಾಗಿ ನನಗೂ ಬಾರ್ನಬ ನಿಗೂ ಬಲಗೈಕೊಟ್ಟು --ತಾವು ಸುನ್ನತಿಯವರ ಬಳಿಗೂ ನಾವು ಅನ್ಯಜನರ ಬಳಿಗೂ ಹೋಗುವದಕ್ಕೆ ಹೇಳಿ ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ