೨ ಸಮುವೇಲನು 14:5

ಅರಸನು ಅವಳಿಗೆ ನಿನಗೆ ಏನಾಯಿತು ಅಂದನು. ಅದಕ್ಕವಳು--ನಾನು ನಿಶ್ಚಯವಾಗಿ ವಿಧವೆ ಯಾದ ಸ್ತ್ರೀಯು; ನನ್ನ ಗಂಡನು ಸತ್ತುಹೋಗಿದ್ದಾನೆ.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 14

3ತಲೆಗೆ ಎಣ್ಣೆಹಚ್ಚಿಕೊಳ್ಳದೆ ಸತ್ತವರಿ ಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು ಎಂದು ಹೇಳಿ ಯೋವಾ ಬನು ಅವಳಿಗೆ ಕಲಿಸಿಕೊಟ್ಟನು.

4ಹಾಗೆಯೇ ತೆಕೋವಿನವಳಾದ ಆ ಸ್ತ್ರೀಯು ಅರಸನ ಸಂಗಡ ಮಾತನಾಡಿ ನೆಲಕ್ಕೆ ಬಿದ್ದು ಭಕ್ತಿ ಗೌರವದಿಂದ ವಂದಿಸಿ--ಅರಸೇ, ಸಹಾಯಮಾಡು ಎಂದು ಕೇಳಿ ಕೊಂಡಳು.

5ಅರಸನು ಅವಳಿಗೆ ನಿನಗೆ ಏನಾಯಿತು ಅಂದನು. ಅದಕ್ಕವಳು--ನಾನು ನಿಶ್ಚಯವಾಗಿ ವಿಧವೆ ಯಾದ ಸ್ತ್ರೀಯು; ನನ್ನ ಗಂಡನು ಸತ್ತುಹೋಗಿದ್ದಾನೆ.

6ಆದರೆ ನಿನ್ನ ಸೇವಕಳಿಗೆ ಇಬ್ಬರು ಕುಮಾರರಿದ್ದರು; ಅವರಿಬ್ಬರೂ ಹೊಲದಲ್ಲಿ ಹೊಡೆದಾಡಿದರು; ಅವ ರನ್ನು ಬಿಡಿಸುವವರು ಯಾರೂ ಇಲ್ಲದ್ದರಿಂದ ಒಬ್ಬನು ಮತ್ತೊಬ್ಬನನ್ನು ಹೊಡೆದು ಕೊಂದುಹಾಕಿದನು.

7ಆದದರಿಂದ ಇಗೋ, ಕುಟುಂಬದವರೆಲ್ಲರು ನಿನ್ನ ಸೇವಕಳ ಮೇಲೆ ವಿರೋಧವಾಗಿ ಎದ್ದು--ತನ್ನ ಸಹೋ ದರನನ್ನು ಕೊಂದವನನ್ನು ಅವನ ಸಹೋದರನ ಪ್ರಾಣಕ್ಕೋಸ್ಕರ ನಾವು ಅವನನ್ನು ಕೊಲ್ಲುವ ಹಾಗೆಯೂ ಬಾಧ್ಯವನ್ನು ಸಹ ನಾಶಮಾಡಿಬಿಡುವ ಹಾಗೆಯೂ ಅವನನ್ನು ಒಪ್ಪಿಸಿಕೊಡು ಎಂದು ಹೇಳಿ ದರು. ಹೀಗೆಯೇ ಅವರು ನನಗೆ ಉಳಿದಿರುವ ನನ್ನ ಕೆಂಡವನ್ನು ಆರಿಸಿ ಭೂಮಿಯ ಮೇಲೆ ನನ್ನ ಗಂಡನ ಹೆಸರನ್ನೂ ಸಂತಾನವನ್ನೂ ಉಳಿಯ ಬಿಡುವದಿಲ್ಲ ಅಂದಳು.

೨ ಸಮುವೇಲನು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी