ಯಾಜಕಕಾಂಡ 13:4

ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 13

2ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು.

3ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.

4ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು.

5ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು.

6ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು.

ಯಾಜಕಕಾಂಡ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी