ಆತನಲ್ಲಿ (ಕ್ರಿಸ್ತನಲ್ಲಿ) ಜ್ಞಾನ ತಿಳುವಳಿಕೆಯ ಎಲ್ಲಾ ನಿಕ್ಷೇಪಗಳು ಅಡಕವಾಗಿವೆ.
1ನಿಮಗೋಸ್ಕರವೂ ಲವೊದಿಕೀಯದವರಿ ಗೋಸ್ಕರವೂ ನನ್ನನ್ನು ಕಣ್ಣಾರೆ ಕಾಣದಿರು ವವರೆಲ್ಲರಿಗೋಸ್ಕರವೂ ನನಗೆ ಬಹಳ ಹೋರಾಟ ಉಂಟೆಂಬದು ನಿಮಗೆ ತಿಳಿದಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.
2ಹೇಗಂದರೆ, ಅವರ ಹೃದಯಗಳು ಪ್ರೀತಿಯಲ್ಲಿ ಹೊಂದಿಕೊಂಡು ಆದರಣೆ ಹೊಂದಿ ಸಂಪೂರ್ಣ ನಿಶ್ಚಯವೆಂಬ ಭಾಗ್ಯವನ್ನು ಪಡೆದು ತಂದೆಯಾದ ದೇವರ ಮತ್ತು ಕ್ರಿಸ್ತನ ಮರ್ಮವನ್ನು ತಿಳಿಯುವದೇ;
3ಆತನಲ್ಲಿ (ಕ್ರಿಸ್ತನಲ್ಲಿ) ಜ್ಞಾನ ತಿಳುವಳಿಕೆಯ ಎಲ್ಲಾ ನಿಕ್ಷೇಪಗಳು ಅಡಕವಾಗಿವೆ.
4ಯಾರಾದರೂ ರಂಜನೆಯಾದ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸಿಯಾರೆಂದು ನಾನು ಇದನ್ನು ಹೇಳುತ್ತೇನೆ.
5ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮದಿಂದ ನಿಮ್ಮೊಂದಿಗಿದ್ದು ನೀವು ಕ್ರಮ ವಾಗಿ ನಡೆಯುವದನ್ನೂ ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವದನ್ನೂ ನೋಡಿ ಸಂತೋಷಪಡುತ್ತೇನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ