೨ ಅರಸುಗಳು 3:23

ಆಗ ಅವರು--ಇದು ರಕ್ತವೇ; ಆ ಅರಸುಗಳು ತಮ್ಮ ತಮ್ಮೊ ಳಗೆ ಜಗಳವಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ; ಈಗ ಮೋವಾಬ್ಯರೇ, ಕೊಳ್ಳೆಗೆ ಬನ್ನಿರಿ ಎಂದು ಹೇಳಿ ಕೊಂಡರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 3

21ಅರಸುಗಳು ತಮ್ಮ ಸಂಗಡ ಯುದ್ಧಮಾಡುವದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ ಅವರು ಆಯುಧ ಧರಿಸತಕ್ಕ ಯೌವನಸ್ಥರು ಮೊದಲುಗೊಂಡು ಎಲ್ಲರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು.

22ಮೋವಾಬ್ಯರು ಉದಯಕಾಲದಲ್ಲಿ ಎದ್ದು ಆ ನೀರಿನ ಮೇಲೆ ಸೂರ್ಯನ ಪ್ರಕಾಶ ಬಿದ್ದದ್ದರಿಂದ ಆ ನೀರು ರಕ್ತದ ಹಾಗೆ ಕೆಂಪಾಗಿರುವದನ್ನು ಕಂಡರು.

23ಆಗ ಅವರು--ಇದು ರಕ್ತವೇ; ಆ ಅರಸುಗಳು ತಮ್ಮ ತಮ್ಮೊ ಳಗೆ ಜಗಳವಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ; ಈಗ ಮೋವಾಬ್ಯರೇ, ಕೊಳ್ಳೆಗೆ ಬನ್ನಿರಿ ಎಂದು ಹೇಳಿ ಕೊಂಡರು.

24ಅವರು ಇಸ್ರಾಯೇಲಿನ ದಂಡಿಗೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಹೊಡೆದು ಮೋವಾಬ್ಯರನ್ನು ಅವರ ದೇಶದ ವರೆಗೂ ಹೊಡೆಯುತ್ತಾ ಬಂದರು.

25ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.

೨ ಅರಸುಗಳು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी