ಲೂಕನು 23:28

ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ.

ಸಂದರ್ಭದೊಂದಿಗೆ ಓದಿ · ಲೂಕನು 23

26ಅವರು ಆತನನ್ನು ತೆಗೆದುಕೊಂಡು ಹೋಗುತ್ತಿ ರುವಾಗ ಹೊಲದಿಂದ ಬರುತ್ತಿದ್ದ ಕುರೇನ್ಯದವನಾದ ಸೀಮೋನನೆಂಬವನನ್ನು ಹಿಡಿದು ಅವನ ಮೇಲೆ ಶಿಲು ಬೆಯನ್ನು ಇಟ್ಟು ಯೇಸುವಿನ ಹಿಂದೆ ಹೊತ್ತುಕೊಂಡು ಹೋಗುವಂತೆ ಮಾಡಿದರು.

27ಆಗ ಜನರ ದೊಡ್ಡ ಗುಂಪೂ ಸ್ತ್ರೀಯರೂ ಆತನಿ ಗಾಗಿ ಶೋಕಿಸುತ್ತಾ ಗೋಳಾಡುತ್ತಾ ಆತನನ್ನು ಹಿಂಬಾ ಲಿಸಿದರು.

28ಆದರೆ ಯೇಸು ಅವರ ಕಡೆಗೆ ತಿರುಗಿ ಕೊಂಡು--ಯೆರೂಸಲೇಮಿನ ಕುಮಾರ್ತೆಯರೇ, ನನ ಗಾಗಿ ಅಳಬೇಡಿರಿ; ಆದರೆ ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ.

29ಯಾಕಂದರೆ--ಇಗೋ, ಬಂಜೆಯರೂ ಎಂದಿಗೂ ಗರ್ಭಿಣಿಯಾಗದವರೂ ಎಂದಿಗೂ ಮೊಲೆ ಕುಡಿಸದವರೂ ಧನ್ಯರು ಎಂದು ಹೇಳುವ ದಿವಸಗಳು ಬರುತ್ತವೆ.

30ಆಗ ಅವರು ಬೆಟ್ಟಗಳಿಗೆ--ನಮ್ಮ ಮೇಲೆ ಬೀಳಿರಿ; ಗುಡ್ಡಗಳಿಗೆ-- ನಮ್ಮನ್ನು ಮುಚ್ಚಿಕೊಳ್ಳಿರಿ ಎಂದು ಹೇಳಲಾರಂಭಿಸು ವರು.

ಲೂಕನು 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी