ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು.
7ಇವರಿಗೆ ಕಂಚುಕಿಯ ಯಜಮಾ ನನು ಹೆಸರುಗಳನ್ನಿಟ್ಟನು, ಹೇಗಂದರೆ ದಾನಿಯೇಲ ನನ್ನು ಬೇಲ್ತೆಶಚ್ಚರನೆಂದೂ ಹನನ್ಯನನ್ನು ಶದ್ರಕ್ನೆಂದೂ ವಿಾಶಾಯೇಲನನ್ನು ಮೇಶಕ್ನೆಂದೂ ಅಜರ್ಯನಿಗೆ ಅಬೆದ್ನೆಗೋ ಎಂದು ಕರೆದನು.
8ಆದರೆ ದಾನಿಯೇಲನು ತಾನು ಅರಸನ ಭೋಜನದ ಪಾಲಿನಿಂದಲಾದರೂ ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು; ಆದುದರಿಂದ ತಾನು ಅಶುದ್ಧ ವಾಗದ ಹಾಗೆ ಕಂಚುಕಿಯರ ಯಜಮಾನನ್ನು ಬೇಡಿ ಕೊಂಡನು.
9ಆಗ ದೇವರು ದಾನಿಯೇಲನನ್ನು ಕಂಚುಕಿಯರ ಯಜಮಾನನ ದಯೆಯಲ್ಲಿಯೂ ಕರುಣೆ ಯಲ್ಲಿಯೂ ಸೇರಿಸಿದನು.
10ಕಂಚುಕಿಯ ಯಜಮಾ ನನು ಹೇಳಿದ್ದೇನಂದರೆ--ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯನಾದ ಅರಸನಿಗೆ ನಾನು ಭಯಪಡುತ್ತೇನೆ; ಅವನು ಯಾಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು? ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ ಅಂದನು.
11ಆ ಮೇಲೆ ಕಂಚುಕಿಯರ ಯಜಮಾನನು ದಾನಿಯೇಲ್, ಹನನ್ಯ, ವಿಾಶಾ ಯೇಲ, ಅಜರ್ಯ ಇವರನ್ನು ನೋಡಿಕೊಳ್ಳುವದಕ್ಕೆ ಇಟ್ಟಿದ್ದ ಮೇಲ್ಜಾರನಿಗೆ ದಾನಿಯೇಲನು ಹೇಳಿದ್ದೇ ನಂದರೆ--
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ