೨ ಪೂರ್ವಕಾಲವೃತ್ತಾಂತ 30:15

ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 30

13ಆದದರಿಂದ ಎರಡನೇ ತಿಂಗಳಲ್ಲಿ ಹುಳಿ ಇಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸುವದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿ ಕೊಂಡು ಮಹಾದೊಡ್ಡ ಸಭೆಯಾಯಿತು.

14ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ತೆಗೆದುಹಾಕಿದರು ಮತ್ತು ಧೂಪಪೀಠಗಳನ್ನೆಲ್ಲಾ ತೆಗೆದು ಬಿಟ್ಟು ಕಿದ್ರೋನ್‌ ಹಳ್ಳದಲ್ಲಿ ಹಾಕಿದರು.

15ಎರಡನೇ ತಿಂಗಳ ಹದಿನಾಲ್ಕನೇ ದಿವಸದಲ್ಲಿ ಪಸ್ಕ ವನ್ನು ವಧಿಸಿದರು. ಯಾಜಕರೂ ಲೇವಿಯರೂ ಲಜ್ಜೆ ಯನ್ನು ಹೊಂದಿ ತಮ್ಮನ್ನು ಪರಿಶುದ್ಧ ಮಾಡಿಕೊಂಡು ಕರ್ತನ ಮನೆಯೊಳಗೆ ದಹನಬಲಿಗಳನ್ನು ತಂದರು.

16ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆ ಯ ನ್ಯಾಯಪ್ರಮಾಣದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು ಯಾಜಕರು ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು.

17ಯಾಕಂದರೆ ಸಭೆಯಲ್ಲಿ ಅನೇಕರು ಅಪರಿಶುದ್ಧರಾಗಿದ್ದರು, ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಕರ್ತನಿಗೆ ಪರಿಶುದ್ಧ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವದಕ್ಕೆ ಇದ್ದರು.

೨ ಪೂರ್ವಕಾಲವೃತ್ತಾಂತ 30 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी