ದಾನಿಯೇಲನು 4:10

ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 4

8ಕಡೆಯಲ್ಲಿ ನನ್ನ ದೇವರ ಹೆಸರಿನ ಹಾಗೆಯೂ ಬೇಲ್ತೆಶಚ್ಚರನೆಂಬ ಹೆಸರುಳ್ಳವನಾಗಿಯೂ ಪರಿಶುದ್ಧ ದೇವರ ಆತ್ಮವನ್ನು ಹೊಂದಿದವನಾಗಿಯೂ ಇರುವ ದಾನಿಯೇಲನು ನನ್ನ ಮುಂದೆ ಬಂದನು; ಅವನಿಗೆ ನಾನು ಕನಸನ್ನು ತಿಳಿಸಿ ಹೇಳಿದ್ದೇನಂದರೆ--

9ಓ ಮಂತ್ರ ಗಾರರ ಯಜಮಾನನಾದ ಬೇಲ್ತೆಶಚ್ಚರನೇ, ನಿನ್ನಲ್ಲಿ ಪರಿಶುದ್ಧ ದೇವರ ಆತ್ಮವಿರುವದೆಂದೂ ಯಾವ ರಹ ಸ್ಯವೂ ನಿನ್ನನ್ನು ಕಳವಳಪಡಿಸದೆಂದೂ ನಾನು ಬಲ್ಲೆನು; ನಾನು ಕಂಡ ಕನಸಿನ ದರ್ಶನವನ್ನೂ ಅದರ ಅರ್ಥ ವನ್ನೂ ನೀನು ನನಗೆ ಹೇಳು.

10ನನ್ನ ಹಾಸಿಗೆಯಲ್ಲಿ ಉಂಟಾದ ನನ್ನ ಮನಸ್ಸಿನ ದರ್ಶನಗಳು--ನಾನು ನೋಡಲಾಗಿ ಇಗೋ, ಭೂಮಧ್ಯದಲ್ಲಿ ಒಂದು ಬಹಳ ಎತ್ತರವಾದ ಮರವು ಇತ್ತು.

11ಆ ಮರವು ಬೆಳೆದು ಬಲವಾಯಿತು; ಅದರ ಎತ್ತರವು ಆಕಾಶಕ್ಕೂ ಅದು ಭೂಲೋಕದ ಕಟ್ಟಕಡೆಯವರೆಗೂ ಕಾಣಿಸುತ್ತಿತ್ತು.

12ಅದರ ಎಲೆಗಳು ಅಂದವಾಗಿದ್ದವು, ಅದರ ಫಲವು ಬಹಳವಾಗಿತ್ತು; ಅದರಲ್ಲಿ ಎಲ್ಲರಿಗೂ ಆಹಾರವಿತ್ತು; ಬಯಲು ಮೃಗಗಳಿಗೆ ಅದರ ಕೆಳಗೆ ನೆರಳಿತ್ತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಿಸುತ್ತಿದ್ದವು, ಎಲ್ಲಾ ಜೀವಿಗಳಿಗೂ ಅದರಿಂದಲೇ ಆಹಾರ ಇರುತ್ತಿತ್ತು.

ದಾನಿಯೇಲನು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी